ADVERTISEMENT

ಬಿಂದ್ರಾ, ವಿಜಯ್‌ ಕುಮಾರ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಪುಣೆ (ಪಿಟಿಐ): ಒಲಿಂಪಿಕ್ಸ್‌ನಲ್ಲಿ  ಬಂಗಾರದ ಸಾಧನೆ ತೋರಿರುವ  ಅಭಿನವ್‌ ಬಿಂದ್ರಾ ಮತ್ತು ವಿಜಯ್‌ ಕುಮಾರ್‌ ಇಲ್ಲಿ ನಡೆಯುತ್ತಿರುವ 58ನೇ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ.

ಬಾಳೇವಾಡಿ ಶೂಟಿಂಗ್‌ ರೇಂಜ್‌ನಲ್ಲಿ ಸೋಮವಾರ ನಡೆದ ಪುರುಷರ  10ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಬಿಂದ್ರಾ ಒಟ್ಟು 208 ಪಾಯಿಂಟ್ಸ್‌ ಕಲೆಹಾಕಿ  ಬಂಗಾರವನ್ನು ತಮ್ಮಲ್ಲೇ ಉಳಿಸಿಕೊಂಡರು. ಹೋದ ವರ್ಷವೂ ಅವರು  ಚಿನ್ನ ಗೆದ್ದಿದ್ದರು.

ಸೇನೆಯ ಸತ್ಯೇಂದ್ರ ಸಿಂಗ್‌  207.2 ಪಾಯಿಂಟ್ಸ್‌ ಸಂಗ್ರಹಿಸಿ  ಬೆಳ್ಳಿ ಜಯಿಸಿದರೆ, ಹರಿಯಾಣದ ಸಂಜೀವ್‌ ರಜಪೂತ್ 185 ಪಾಯಿಂಟ್ಸ್‌ ಗಳಿಸಿ ಕಂಚಿಗೆ ತೃಪ್ತಿಪಟ್ಟರು.

ವಿಜಯ್‌ ಚಾಂಪಿಯನ್‌: 2012ರ ಲಂಡನ್‌ ಒಲಿಂಪಿಕ್ಸ್‌ ನಲ್ಲಿ ಬೆಳ್ಳಿ ಗೆದ್ದಿರುವ  ವಿಜಯ್‌ ಕುಮಾರ್‌ 25ಮೀ. ಸ್ಟ್ಯಾಂಡರ್ಡ್‌ ಪಿಸ್ತೂಲ್‌ ವಿಭಾಗದಲ್ಲಿ 571 ಪಾಯಿಂಟ್ಸ್‌ ಕಲೆಹಾಕುವ ಮೂಲಕ  ಸ್ವರ್ಣದ ಸಾಧನೆ ತೋರಿದರು.

ಡಿ.25ರಂದು ಡಬಲ್ಸ್‌ ಚೆಸ್‌ ಟೂರ್ನಿ
ಬೆಂಗಳೂರು:
ಇನೋವೇಟರ್ಸ್‌ ಚೆಸ್‌ ಅಕಾಡೆಮಿಯು (ಐಸಿಎ) ಡಿಸೆಂಬರ್‌ 25ರಂದು ಕೋಣನಕುಂಟೆಯ ಸಿಲಿಕಾನ್‌ ಸಿಟಿ ಪಬ್ಲಿಕ್‌
ಶಾಲೆಯಲ್ಲಿ ಡಬಲ್ಸ್‌ ಚೆಸ್‌ ಟೂರ್ನಿ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 9980409870ಗೆ ಸಂಪರ್ಕಿಸ ಬಹುದು.

ಮೈನೇನಿ ಜತೆ ಆಡಲಿರುವ ಭೂಪತಿ
ಚೆನ್ನೈ (ಪಿಟಿಐ):
ಭಾರತದ ಅನುಭವಿ ಆಟಗಾರ ಮಹೇಶ್‌ ಭೂಪತಿ ಮುಂಬರುವ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸಾಕೇತ್‌ ಮೈನೇನಿ ಜತೆಗೂಡಿ ಆಡಲಿದ್ದಾರೆ.

ಈ ಜೋಡಿ ಟೂರ್ನಿಯಲ್ಲಿ ವೈಲ್ಡ್‌ ಕಾರ್ಡ್‌ ಅರ್ಹತೆ ಗಿಟ್ಟಿಸಿದೆ. ಜೀವನ್‌ ನೆಡುಂಚೆಳಿಯನ್‌ ಮತ್ತು ಶ್ರೀರಾಮ್‌ ಬಾಲಾಜಿ ಕೂಡಾ ವೈಲ್ಡ್‌ ಕಾರ್ಡ್‌ ಅರ್ಹತೆ ಪಡೆದಿದ್ದಾರೆ. ಸಿಂಗಲ್ಸ್‌ ವಿಭಾಗದಲ್ಲಿ ಸೋಮದೇವ್‌ ದೇವವರ್ಮನ್‌ ಮತ್ತು ರಾಮಕುಮಾರ್ ರಾಮನಾಥನ್‌ ಅವರೂ ವೈಲ್ಡ್‌ ಕಾರ್ಡ್‌ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.