ADVERTISEMENT

ಬಿಎಫ್‌ಐಗೆ ಐಒಎ ಮಾನ್ಯತೆ

ಪಿಟಿಐ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST

ನವದೆಹಲಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತ ಬಾಕ್ಸಿಂಗ್‌ ಫೆಡರೇಷನ್‌ಗೆ (ಬಿಎಫ್‌ಐ) ಮಾನ್ಯತೆ ನೀಡುವುದಾಗಿ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ತಿಳಿಸಿದೆ.

ಬಾಕ್ಸಿಂಗ್‌ ಇಂಡಿಯಾದ ಮೇಲೆ ನಿಷೇಧ ಹೇರಿದ್ದ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ ಹೊಸದಾಗಿ ಚುನಾ ವಣೆ ನಡೆಸುವಂತೆ ಐಒಎಗೆ ಸೂಚಿಸಿತ್ತು. ಭಾನುವಾರ ನಡೆದ ಚುನಾವಣೆಯಲ್ಲಿ ಉದ್ಯಮಿ ಅಜಯ್‌ ಸಿಂಗ್‌ ಅವರು  ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

‘ಭಾರತ ಅಮೆಚೂರ್‌ ಬಾಕ್ಸಿಂಗ್‌ ಫೆಡರೇಷನ್‌ ಈಗಲೂ ಐಒಎ ಸದಸ್ಯತ್ವ ಹೊಂದಿದೆ. ಪ್ರಸ್ತುತ ಐಎಬಿಎಫ್‌ನ ಸದಸ್ಯತ್ವ ಹೊಂದಿರುವ ರಾಜ್ಯ ಘಟಕ ಗಳು ಇದರಿಂದ ಹೊರ ಬಂದು ಹೊಸ ದಾಗಿ ಬಿಎಫ್‌ಐನ ಸದಸ್ಯತ್ವ ಪಡೆಯು ವಂತೆ ಸೂಚಿಸಲಾಗಿದೆ. ಇನ್ನೊಂದು ತಿಂಗಳ ಒಳಗೆ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣವಾಗಲಿದೆ’ ಎಂದು ಐಒಎ ಮಹಾಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.