ADVERTISEMENT

ಬೀಗಲ್ಸ್ ತಂಡಗಳಿಗೆ ಪ್ರಶಸ್ತಿ

ರಾಜ್ಯ ಯೂತ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ಸೋಮವಾರ ನಡೆದ 16 ವರ್ಷದೊಳಗಿನವರ ರಾಜ್ಯ ಯೂತ್‌ ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಬೀಗಲ್ಸ್‌ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ (ನಿಂತವರು, ಎಡದಿಂದ) ಧನ್ಯತಾ, ರಕ್ಷಾ, ಸೃಷ್ಠಿ, ತ್ರಿಷಾ, ಶ್ರೀನಿವಾಸ್‌ (ಸಹಾಯಕ ಕೋಚ್‌),ಮೋಹನ್‌ (ಕೋಚ್), ಸಂಜನಾ, ತನಿಷ್ಕಾ, ಕೀರ್ತನಾ ಮತ್ತು ಮೀನಾ. (ಕುಳಿತವರು), ನಿತ್ಯಾ, ಮಾನ್ಯ, ಹೇಮಾ, ವರ್ಷಿಣಿ, ರುತು, ಸಾಯಿ ಪ್ರಿಯಾಂಕ ಮತ್ತು ಅನಘಾ  ಪ್ರಜಾವಾಣಿ ಚಿತ್ರ

ಬೆಂಗಳೂರು: ಮಾಧವ್‌, ವ್ಯಾಸ್ ಅವರ ಉತ್ತಮ  ಆಟದಿಂದಾಗಿ ಬೀಗಲ್ಸ್ ತಂಡ ಸೋಮವಾರ ಇಲ್ಲಿ ನಡೆದ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದೆ.

ಬಾಲವೇಂದ್ರ ಮೆಮೋರಿಯಲ್ ಟ್ರೋಫಿಗಾಗಿ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದ ಟೂರ್ನಿಯಲ್ಲಿ ಬೀಗಲ್ಸ್ ತಂಡ ಬಾಲಕರ ಮತ್ತು ಬಾಲಕಿಯರ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿದೆ.

ಬಾಲಕರ ವಿಭಾಗದ ಫೈನಲ್‌ನಲ್ಲಿ ಬೀಗಲ್ಸ್ ಕ್ಲಬ್‌ 56–47 ಪಾಯಿಂಟ್‌ ಗಳಿಂದ ಜೆಎಸ್‌ಸಿ ತಂಡವನ್ನು ಮಣಿಸಿತು. ಮಾಧವ್ ಈ ತಂಡದ ಪರ 17 ಪಾಯಿಂಟ್‌ಗಳನ್ನು ಹೆಕ್ಕಿದರು, ವ್ಯಾಸ್ ಹಾಗೂ ಶ್ರೇಯಸ್ ಕ್ರಮವಾಗಿ 15 ಮತ್ತು 13 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

ADVERTISEMENT

ತೀವ್ರ ಪೈಪೋಟಿ ಹೊಂದಿದ್ದ ಪಂದ್ಯದಲ್ಲಿ ಬೀಗಲ್ಸ್ ಆರಂಭದಿಂದಲೇ ಪಾಯಿಂಟ್ಸ್‌ ಗಳಿಸುವಲ್ಲಿ ಮುನ್ನಡೆ ಹೊಂದಿತ್ತು. ಮೊದಲರ್ಧದ ವೇಳೆಗೆ 33–22ರ ಅಂತರ ಸಾಧಿಸಿತ್ತು. ದ್ವಿತೀಯಾರ್ಧದ ಪಂದ್ಯದಲ್ಲಿ ಸುಲಭ ವಾಗಿ ಗೆಲುವಿನ ಹಾದಿ ಕ್ರಮಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಧಾರವಾಡದ ಮಲ್ಲ ಸಜ್ಜನ ತಂಡ 35–30ರಲ್ಲಿ ವೈಎಮ್‌ ಎಮ್ಎ ತಂಡದ ಎದುರು ಜಯದಾಖ ಲಿಸಿತು.

ಧಾರವಾಡ ತಂಡದ ಭರ ವಸೆಯ ಆಟಗಾರ ಚಿನ್ಮಯ್‌ 23 ಪಾಯಿಂಟ್ಸ್‌ ಗಳಿಸಿದರು. ವಿರಾಮದ ವೇಳೆಗಾಗಲೇ ಧಾರವಾಡ 19–9ರಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿತ್ತು. ಬಾಲಕಿಯರ ವಿಭಾಗದಲ್ಲೂ ಬೀಗಲ್ಸ್ ಮೇಲುಗೈ ಸಾಧಿಸಿತು. ಫೈನಲ್‌ನಲ್ಲಿ ಈ ತಂಡ 62–52ಪಾಯಿಂಟ್ಸ್‌ಗಳಿಂದ ಡಿವೈಇಎಸ್ ವಿಜಯಾಪುರ ತಂಡದ ಮೇಲೆ ಗೆದ್ದಿತು. ವಿರಾಮದ ವೇಳೆಗೆ ಈ ತಂಡ 40–21ರ ಮುನ್ನಡೆ ಪಡೆದಿತ್ತು.

ಸಂಜನಾ ಹಾಗೂ ಅನಘಾ ಬೀಗಲ್ಸ್ ತಂಡದ ಗೆಲುವಿನ ರೂವಾರಿಗಳು ಎನಿ ಸಿದರು. ಈ ಆಟಗಾರ್ತಿಯರು ಕ್ರಮವಾಗಿ 22 ಮತ್ತು 18 ಪಾಯಿಂಟ್ಸ್ ಪಡೆದರು. ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ ಮೌಂಟ್ಸ್ ಕ್ಲಬ್‌ 12–16ರಲ್ಲಿ ಹಲಸೂರು ಯೂನಿಯನ್‌ ಮೇಲೆ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.