ADVERTISEMENT

ಬೆಲ್‌ ಶತಕ: ಇಂಗ್ಲೆಂಡ್‌ ಬೃಹತ್‌ ಮೊತ್ತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಸೌತ್ ಹ್ಯಾಂಪ್ಟನ್‌: ಗ್ಯಾರಿ ಬಲಾನ್ಸ್‌ ಮತ್ತು ಇಯಾನ್‌ ಬೆಲ್‌ ಅವರ ಅಮೋಘ ಜೊತೆಯಾಟದ ಬಲದಿಂದ ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.

ಭಾನುವಾರದ ಅಂತ್ಯಕ್ಕೆ 247 ರನ್ ಗಳಿಸಿದ್ದ ಆತಿಥೇಯರು ಎರಡನೇ ದಿನ ಭಾರತದ ಬೌಲರ್‌ಗಳ ಬೆವರಿಳಿಸಿದರು. ತಂಡ 163.4 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 569 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡು ಪರದಾಡಿದ ಭಾರತ ಸೋಮವಾರದ ಆಟ ಅಂತ್ಯ ಕಂಡಾಗ 14 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 25 ರನ್‌ ಗಳಿಸಿತ್ತು. ಶಿಖರ್‌ ಧವನ್‌ (6) ವೈಫಲ್ಯ ಮುಂದುವರಿಯಿತು.

ಮೊದಲ ದಿನ ಶತಕ ಗಳಿಸಿದ್ದ ಬಲಾನ್ಸ್‌ (156, 288ಎಸೆತ, 24ಬೌಂಡರಿ) ಆಟಕ್ಕೆ ಬೆಲ್‌ ಉತ್ತಮ ಬೆಂಬಲ ನೀಡಿದರು. ಬೆಲ್‌ 256 ಎಸೆತಗಳಲ್ಲಿ 19 ಬೌಂಡರಿ ಹಾಗೂ ಮೂರು ಸಿಕ್ಸರ್‌ ಸೇರಿದಂತೆ 167 ರನ್ ಗಳಿಸಿದರು. ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 142 ರನ್‌ ಕಲೆ ಹಾಕಿತು. ದಿನದಾಟದ ಕೊನೆಯವರೆಗೂ ಬೆಲ್‌ ಅಬ್ಬರ ನಿಲ್ಲಲಿಲ್ಲ.

ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್‌  163.4 ಓವರ್‌ಗಳಲ್ಲಿ

7 ವಿಕೆಟ್‌ಗೆ 569 ಡಿಕ್ಲೇರ್ಡ್‌
(ಭಾನುವಾರದ ಅಂತ್ಯಕ್ಕೆ 90 ಓವರ್‌ಗಳಲ್ಲಿ 2 ವಿಕೆಟ್‌ಗೆ 247)
ಗ್ಯಾರಿ ಬಲಾನ್ಸ್‌ ಸಿ ದೋನಿ ಬಿ ರೋಹಿತ್‌ ಶರ್ಮ 156
ಇಯಾನ್‌ ಬೆಲ್‌ ಸಿ ಪಂಕಜ್‌ ಸಿಂಗ್‌ ಬಿ ಭುವನೇಶ್ವರ್‌  167
ಜೋ ರೂಟ್ ಸಿ ದೋನಿ ಬಿ ಭುವನೇಶ್ವರ್‌ ಕುಮಾರ್  03
ಮೋಯಿನ್‌ ಅಲಿ ಸಿ ಅಜಿಂಕ್ಯ ರಹಾನೆ ಬಿ ಭುವನೇಶ್ವರ್‌  12
ಜಾಸ್‌ ಬಟ್ಲರ್‌ ಬಿ ರವೀಂದ್ರ ಜಡೇಜ  85
ಕ್ರಿಸ್‌ ವೋಕಸ್‌ ಔಟಾಗದೆ  07

ಇತರೆ: (ಬೈ–5, ಲೆಗ್‌ ಬೈ–11, ವೈಡ್‌–2)  18
ವಿಕೆಟ್‌ ಪತನ: 3–355 (ಬಲಾನ್ಸ್‌; 116.5), 4–378 (ರೂಟ್‌; 127.2), 5–420 (ಅಲಿ; 135.5), 6–526 (ಬೆಲ್‌; 158.3), 7–569 (ಬಟ್ಲರ್; 163.4)

ಬೌಲಿಂಗ್‌: ಭುವನೇಶ್ವರ್‌ ಕುಮಾರ್ 37–10–101–3, ಮೊಹಮ್ಮದ್‌ ಶಮಿ 33–4–123–1, ಪಂಕಜ್‌ ಸಿಂಗ್‌ 37–8–146–0, ರೋಹಿತ್‌ ಶರ್ಮ 9–0–26–1, ರವೀಂದ್ರ ಜಡೇಜ 45.4–10–153–2, ಶಿಖರ್‌ ಧವನ್‌ 2–0–4–0
ಭಾರತ ಮೊದಲ ಇನಿಂಗ್ಸ್‌ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 25
ಮುರಳಿ ವಿಜಯ್‌ ಬ್ಯಾಟಿಂಗ್‌ 11
ಶಿಖರ್‌ ಧವನ್ ಸಿ ಅಲಸ್ಟೇರ್‌ ಕುಕ್‌ ಬಿ ಜೇಮ್ಸ್‌ ಆ್ಯಂಡರ್‌ಸನ್‌ 06
ಚೇತೇಶ್ವರ ಪೂಜಾರ ಬ್ಯಾಟಿಂಗ್‌ 04
ಇತರೆ: (ಬೈ–4)  04
ವಿಕೆಟ್‌ ಪತನ: 1–17 (ಧವನ್‌; 6.3). 
ಬೌಲಿಂಗ್‌: ಜೇಮ್ಸ್‌ ಆ್ಯಂಡರ್‌ಸನ್‌ 7–3–14–1, ಸ್ಟುವರ್ಟ್‌ ಬ್ರಾಡ್‌ 4–2–4–0, ಕ್ರಿಸ್‌ ಜೋರ್ಡಾನ್‌ 2–1–3–0, ಕ್ರಿಸ್‌ ವೋಕಸ್‌ 1–1–0–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT