ADVERTISEMENT

ಬ್ಯಾಡ್ಮಿಂಟನ್‌ : ಭಾರತ ಶುಭಾರಂಭ

ಪಿಟಿಐ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ಹೊಚಿಮಿನ್, ವಿಯೆಟ್ನಾಂ: ಭಾರತ ತಂಡ ಬುಧವಾರ ಇಲ್ಲಿ ಆರಂಭ ವಾದ  ಏಷ್ಯಾ ಬ್ಯಾಡ್ಮಿಂಟನ್ ತಂಡ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 4–1ರಲ್ಲಿ ಸಿಂಗಪುರವನ್ನು ಮಣಿಸಿದೆ.

ಮಿಶ್ರ ಡಬಲ್ಸ್‌ ಪಂದ್ಯದಲ್ಲಿ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ  21–23, 17–21ರಲ್ಲಿ ಯೋಂಗ್ ಕಿ ಮತ್ತು ವೀ ಹನ್ ವಿರುದ್ಧ ಸೋಲು ಕಂಡರು. 

ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ 21–9, 21–16ರಲ್ಲಿ ಕೀನ್ ಲೊ ಎದುರು ಗೆಲುವು ಪಡೆದರು. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ 21–12, 21–17ರಲ್ಲಿ ಡ್ಯಾನಿ ಬವಾ ಮತ್ತು ಹೆಂದ್ರ ವಿಜಯಾ ಮೇಲೆ ಜಯಗಳಿಸಿ ಮುನ್ನಡೆ ಯನ್ನು 2–1ರಲ್ಲಿ ಹೆಚ್ಚಿಸಿದರು. 

ಮಹಿಳೆ ಯರ ಸಿಂಗಲ್ಸ್‌ನಲ್ಲಿ ರಿತುಪರ್ಣಾ ದಾಸ್‌ 23–21, 21–18ರಲ್ಲಿ ಗೆದ್ದರೆ, ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ 19–21, 21–17, 21–17ರಲ್ಲಿ ರೆನ್‌ ನೆಂಗ್ ಮತ್ತು ಜಯಾ ಯಿಂಗ್‌ ಮೇಲೆ ಜಯಿಸಿತು. ಮುಂದಿನ ಸುತ್ತಿನಲ್ಲಿ ಭಾರತ ತಂಡ ಕೊರಿಯಾ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.