ADVERTISEMENT

ಭಾರತ–ಇಂಗ್ಲೆಂಡ್‌ ಏಕದಿನ ಸರಣಿ: ಹರಿದು ಬಂದವು 2090ರನ್‌, ದಾಖಲಾದವು 200 ಬೌಂಡರಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 18:45 IST
Last Updated 23 ಜನವರಿ 2017, 18:45 IST
ಭಾರತ–ಇಂಗ್ಲೆಂಡ್‌ ಏಕದಿನ ಸರಣಿ: ಹರಿದು ಬಂದವು 2090ರನ್‌, ದಾಖಲಾದವು 200 ಬೌಂಡರಿ
ಭಾರತ–ಇಂಗ್ಲೆಂಡ್‌ ಏಕದಿನ ಸರಣಿ: ಹರಿದು ಬಂದವು 2090ರನ್‌, ದಾಖಲಾದವು 200 ಬೌಂಡರಿ   
ಕೊಲ್ಕತ್ತ: ನಾಯಕ ವಿರಾಟ್‌ ಕೊಹ್ಲಿ ಭಾರತ ಕ್ರಿಕೆಟ್‌ನ ಮೂರೂ ಮಾದರಿಗೆ ನಾಯಕತ್ವ ವಹಿಸಿಕೊಂಡು ನಾಯಕತ್ವ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗದಲ್ಲೂ ಯಶಸ್ವಿಯಾಗಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
 
ತಮ್ಮ ನಾಯಕತ್ವದ ಮೊದಲ ಸರಣಿಯಲ್ಲಿ ಇಂಗ್ಲೆಂಡ್‌  ಎದುರು 2–1 ಅಂತರದ ಜಯ ಸಾಧಿಸಿದ್ದು ಶುಭಾರಂಭ ಮಾಡಿದ್ದಾರೆ.
 
ಜೊತೆಗೆ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾದ ಈ ಪಂದ್ಯಾವಳಿ ಹಲವು ಕಾರಣಗಳಿಂದ ಸದಾ ನೆನಪಿನಲ್ಲುಳಿಯುತ್ತದೆ.
 
ಪಂದ್ಯಾವಳಿಯ ವಿಶೇಷತೆಗಳು
* ಸತತ ಆರು ವರ್ಷದ ಬಳಿಕ ಶತಕ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದ ಯುವರಾಜ್‌ ಸಿಂಗ್‌ ತಮ್ಮ ಏಕದಿನಲ್ಲಿ ತಮ್ಮ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. 
 
* ಯುವಿ-ದೋನಿ ಎರಡನೇ ಏಕದಿನ ಪಂದ್ಯದಲ್ಲಿ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ 256 ರನ್‌ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ವಿಕೆಟ್‌ಗೆ ಗಳಿಸಿದ ಮೂರನೇ ಅತ್ಯಧಿಕ ಮೊತ್ತವಾಯಿತು
 
*ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಭರವಸೆ ಮೂಡಿಸಿದ ಕೇದಾರ್ ಜಾದವ್.
 
* ಮುಂದುವರಿಯಿತು ಶಿಖರ್‌ ಧವನ್- ಅಜಿಂಕ್ಯ ರಹಾನೆ ಬ್ಯಾಟಿಂಗ್‌ ವೈಫಲ್ಯ.
 
* ಹರಿದು ಬಂದ ಒಟ್ಟು ರನ್ -2090: ಭಾರತ ಗಳಿಸಿದ್ದು 1053, ಇಂಗ್ಲೆಂಡ್ ಗಳಿಸಿದ್ದು 1037.
 
* ಸರಣಿಯ ಎಲ್ಲಾ ಆರು(ಮೂರು ಪಂದ್ಯ) ಇನಿಂಗ್ಸ್‌ನಲ್ಲಿ ಪ್ರತಿ ತಂಡ 300ಕ್ಕಿಂತಲೂ ಹೆಚ್ಚಿನ ರನ್‌ ಗಳಿಸಿದ್ದು ಗಮನಾರ್ಹ.
 
* ದಾಖಲಾದ ಒಟ್ಟು ಬೌಂಡರಿ -200: ಭಾರತ ಪರ 104, ಇಂಗ್ಲೆಂಡ್ ಪರ 96
 
* ದಾಖಲಾದ ಒಟ್ಟು ಸಿಕ್ಸರ್ -56: ಭಾರತ ಪರ 30, ಇಂಗ್ಲೆಂಡ್ ಪರ 26
 
* ದಾಖಲಾದ ಐದರಲ್ಲಿ ನಾಲ್ಕು ಶತಕ ಭಾರತದ ಬ್ಯಾಟ್ಸ್‌ಮನ್‌ಗಳು ಗಳಿಸಿದರೆ, ಇನ್ನೊಂದು ಶತಕವಷ್ಟೇ ಇಂಗ್ಲೆಂಡ್‌ ಆಟಗಾರ ಗಳಿಸಿದರು. ಸರಣಿಯಲ್ಲಿ ಒಟ್ಟು ಹನ್ನೆರಡು ಅರ್ಧ ಶತಕಗಳು ದಾಖಲಾದವು.
 
* ಸರಣಿಯಲ್ಲಿ ಉಭಯ ತಂಡದ ಬೌಲರ್‌ಗಳು ಒಟ್ಟು 45 ವಿಕೆಟ್‌ ಉರುಳಿಸಿದ್ದು ಸದರಲ್ಲಿ ಬಹುಪಾಲ (34) ವೇಗಿಗಳೇ ಗಳಿಸಿದ್ದು ವಿಶೇಷ.
 
* ಇಂಗ್ಲೆಂಡ್‌ ತಂಡದ ಆಟಗಾರ ಜಾಸನ್ ರಾಯ್ ಮೂರೂ ಇನಿಂಗ್ಸ್‍ಗಳಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
 
* ಪಂದ್ಯಾವಳಿಯಲ್ಲಿ ಒಟ್ಟು 4 ರನೌಟ್‌ಗಳು ದಾಖಲಾದವು. ಎಲ್ಲಾ ರನೌಟ್‌ನಲ್ಲಿ ಸಿಲುಕಿದ್ದು ಇಂಗ್ಲೆಂಡ್ ಆಟಗಾರರೇ ಎಂಬುದು ವಿಶೇಷ.
 
* ಅತಿ ಹೆಚ್ಚು ರನ್ ಗಳಿಸಿದ ಕೇದಾರ್ ಜಾದವ್ (232) ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಇಂಗ್ಲೆಂಡ್‌ ವೇಗಿ ಕ್ರಿಸ್ ವೋಕ್ಸ್  ಅತಿ ಹೆಚ್ಚು ವಿಕೆಟ್ (179ಕ್ಕೆ 6) ಪಡೆದ ಬೌಲರ್‌ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.