ADVERTISEMENT

ಭಾರತದ ಎದುರಾಳಿ ತೈಪೆ

ಹೀರೊ ಇಂಟರ್‌ಕಾಂಟಿನೆಂಟಲ್‌ ಫುಟ್‌ಬಾಲ್‌ ಟೂರ್ನಿ

ಪಿಟಿಐ
Published 22 ಮೇ 2018, 20:29 IST
Last Updated 22 ಮೇ 2018, 20:29 IST
ಭಾರತದ ಫುಟ್‌ಬಾಲ್‌ ತಂಡ ಅಭ್ಯಾಸ ನಡೆಸುತ್ತಿರುವುದು ಪಿಟಿಐ ಚಿತ್ರ
ಭಾರತದ ಫುಟ್‌ಬಾಲ್‌ ತಂಡ ಅಭ್ಯಾಸ ನಡೆಸುತ್ತಿರುವುದು ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಹೀರೊ ಇಂಟರ್‌ಕಾಂಟಿನೆಂಟಲ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಚೀನಾ ತೈಪೆ ತಂಡವನ್ನು ಎದುರಿಸಲಿದೆ. ಜೂನ್‌ ಒಂದರಿಂದ ಈ ಟೂರ್ನಿಯು ಆರಂಭವಾಗಲಿದೆ.

ಕೀನ್ಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ಜೂನ್‌ ಎರಡರಂದು ನಡೆಯುವ ಪಂದ್ಯದಲ್ಲಿ ಈ ಉಭಯ ತಂಡಗಳು ಸೆಣಸಾಟ ನಡೆಸಲಿವೆ.

‘ಮುಂದಿನ ವರ್ಷ ಯುಎಇನಲ್ಲಿ ನಡೆಯುವ ಎಎಫ್‌ಸಿ ಏಷ್ಯನ್‌ ಕಪ್‌ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳಲು ಇದು ಉತ್ತಮ ವೇದಿಕೆ. ಈಗಾಗಲೇ ಭಾರತದ ಫುಟ್‌ಬಾಲ್‌ ತಂಡವು ಅಭ್ಯಾಸ ಆರಂಭಿಸಿದೆ’ ಎಂದು ಭಾರತ ತಂಡದ ಕೋಚ್‌ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ಹೇಳಿದ್ದಾರೆ.

ADVERTISEMENT

‘ಚೀನಾ ತೈಪೆ ಹಾಗೂ ಕೀನ್ಯಾ ತಂಡಗಳು ನಮಗೆ ಸವಾಲೊಡ್ಡಲಿವೆ. ಆ ತಂಡದ ಪ್ರಮುಖ ಆಟಗಾರರನ್ನು ಕಟ್ಟಿಹಾಕಲು ಯೋಜನೆ ಸಿದ್ದಪಡಿಸಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.