ADVERTISEMENT

ಮೀನಾಕ್ಷಿ ಅತ್ಯುತ್ತಮ ಈಜುಗಾರ್ತಿ

ಅಂತರ ವಿ.ವಿ ಈಜು: ಜೈನ್‌ ವಿ.ವಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯ ತಂಡ ಇಲ್ಲಿ ಮುಕ್ತಾಯವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ  ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.

154.5 ಪಾಯಿಂಟ್ಸ್‌ ಕಲೆಹಾಕುವ ಮೂಲಕ  ತಂಡ ಈ ಸಾಧನೆ ಮಾಡಿತು.  ದೆಹಲಿ ವಿ.ವಿ (131.2 ಪಾಯಿಂಟ್ಸ್‌) ಮತ್ತು ಬೆಳಗಾವಿಯ ವಿಟಿಯು (97.3 ಪಾಯಿಂಟ್ಸ್‌) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಮಹಿಳೆಯರ ವಿಭಾಗದ ಪ್ರಶಸ್ತಿಯೂ (106 ಪಾಯಿಂಟ್ಸ್‌) ಜೈನ್‌ ವಿ.ವಿ ಪಾಲಾದರೆ,   ದೆಹಲಿ ವಿ.ವಿ (60 ಪಾಯಿಂಟ್ಸ್‌) ‘ರನ್ನರ್ಸ್‌ ಅಪ್’ಗೆ ತೃಪ್ತಿಪಟ್ಟಿತು. ಪುರುಷರ ವಿಭಾಗದ ಪ್ರಶಸ್ತಿಯನ್ನು ಬೆಳಗಾವಿಯ ವಿಟಿಯು (65 ಪಾಯಿಂಟ್ಸ್‌) ಎತ್ತಿ ಹಿಡಿಯಿತು.

ಗುರುವಾರದ ಫಲಿತಾಂಶಗಳು:
ಪುರುಷರ ವಿಭಾಗ: 100ಮೀ. ಫ್ರೀಸ್ಟೈಲ್‌: ನೀಲ್‌ ಕಾಂಟ್ರಾಕ್ಟರ್‌ (ಗುಜರಾತ್‌ ವಿ.ವಿ, ಕಾಲ: 53.56ಸೆ)–1, ಅಮನ್‌ ಘಾಯ್‌ (ಗುರುನಾನಕ್‌ ವಿ.ವಿ, ಕಾಲ: 53.57ಸೆ)–2, ವಿರಾಜ್‌ ಧೋಕಲೆ (ಎಸ್‌ಪಿಪಿಯು, ಕಾಲ: 54.95ಸೆ)–3. 100ಮೀ. ಬ್ರೆಸ್ಟ್‌ಸ್ಟ್ರೋಕ್‌:  ಜಶನ್‌ದೀಪ್‌ ಸಿಂಗ್‌ (ಪಂಜಾಬ್‌ ವಿ.ವಿ, 1:05.56ಸೆ)–1, ಪುಲ್ಕಿತ್‌ (ದೇವಿ ಲಾಲ್‌ ವಿ.ವಿ, 1:06.65ಸೆ)–2, ದೀಪಕ್‌ ಕುಮಾರ್‌ (ಗುಜರಾತ್‌ ವಿ.ವಿ, 1:09.­85ಸೆ)–3. 200ಮೀ. ಫ್ರೀಸ್ಟೈಲ್‌: ಬಾಬಿ ರಾಣಾ (ದೆಹಲಿ ವಿ.ವಿ, 2:09.02ಸೆ)–1, ಮಿತೇಶ್‌ ಕುಂಟೆ (ಶಿವಾಜಿ ವಿ.ವಿ, 2:11.31ಸೆ)–2, ಕುನಾಲ್‌ ಮೋಹಿತೆ (2:12.12)–3.

ಮಹಿಳಾ ವಿಭಾಗ: 100ಮೀ. ಫ್ರೀಸ್ಟೈಲ್‌: ವಿ.ಕೆ.ಆರ್. ಮೀನಾಕ್ಷಿ (ಜೈನ್‌ ವಿ.ವಿ, 1:01.44ಸೆ)–1, ಟಿ.ಸ್ನೇಹಾ (ಆರ್‌.ಜಿ.­ಯು.­ಎಚ್‌.ಎಸ್‌, 1:02.71ಸೆ)–2, ಎಸ್‌.ಸಂಧ್ಯಾ (ಕೇರಳ ವಿ.ವಿ, 1:03.71ಸೆ)–3. 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಪ್ರಿಯಾಂಕಾ (ದೆಹಲಿ ವಿ.ವಿ, 1:18.47ಸೆ)–1, ಪೂರ್ವಾ ಶೇಟೈ (ಜೈನ್‌ ವಿ.ವಿ, 1:21.11ಸೆ)–2, ದಿವ್ಯಾ ಗುರುಸ್ವಾಮಿ (ವಿಟಿಯು, 1:23.54ಸೆ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.