ADVERTISEMENT

ಮೂರನೇ ಸುತ್ತಿಗೆ ರೋಜರ್‌ ಫೆಡರರ್‌ ಲಗ್ಗೆ

ಮಾಂಟ್ರಿಯಲ್‌ ಟೆನಿಸ್‌ ಟೂರ್ನಿ

ಏಜೆನ್ಸೀಸ್
Published 10 ಆಗಸ್ಟ್ 2017, 19:30 IST
Last Updated 10 ಆಗಸ್ಟ್ 2017, 19:30 IST
ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಚೆಂಡನ್ನು ಹಿಂತಿರುಗಿಸಲು ಮುಂದಾದ ರೀತಿ. –ಎಎಫ್‌ಪಿ ಚಿತ್ರ
ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಚೆಂಡನ್ನು ಹಿಂತಿರುಗಿಸಲು ಮುಂದಾದ ರೀತಿ. –ಎಎಫ್‌ಪಿ ಚಿತ್ರ   

ಮಾಂಟ್ರಿಯಲ್‌: ಅಮೋಘ ಆಟ ಆಡಿದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಎಟಿಪಿ ಮಾಂಟ್ರಿಯಲ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಫೆಡರರ್‌ 6–2, 6–1ರ ನೇರ ಸೆಟ್‌ಗಳಿಂದ ಕೆನಡಾದ ಪೀಟರ್‌ ಪೊಲಾನ್‌ಸ್ಕಿ ಅವರನ್ನು ಸೋಲಿಸಿದರು.

ಆಸ್ಟ್ರೇಲಿಯಾ ಓಪನ್‌ ಮತ್ತು ವಿಂಬಲ್ಡನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿ ಮಿಂಚಿದ್ದ ಫೆಡರರ್‌ ಅವರು ಪೀಟರ್‌ ವಿರುದ್ಧದ ಹೋರಾಟದಲ್ಲಿ ಏಕಪಕ್ಷೀಯವಾಗಿ ಗೆಲುವು ಒಲಿಸಿಕೊಂಡರು. ಮೂರನೇ ಸುತ್ತಿನಲ್ಲಿ ಫೆಡರರ್‌ ಅವರು ಸ್ಪೇನ್‌ನ ಡೇವಿಡ್‌ ಫೆರರ್‌ ವಿರುದ್ಧ ಆಡಲಿದ್ದಾರೆ.

ADVERTISEMENT

‌ದಿನದ ಇನ್ನೊಂದು ಪಂದ್ಯದಲ್ಲಿ ಫೆರರ್‌ 7–6, 3–6, 6–1ರಲ್ಲಿ 15ನೇ ಶ್ರೇಯಾಂಕಿತ ಆಟಗಾರ ಜಾಕ್‌ ಸಾಕ್‌ ಅವರನ್ನು ಸೋಲಿಸಿದರು.

ನಡಾಲ್‌ ಮಿಂಚು: ಸ್ಪೇನ್‌ನ ನಡಾಲ್‌ ಎರಡನೇ ಸುತ್ತಿನ ಪೈಪೋಟಿಯಲ್ಲಿ 6–1, 6–2ರ ನೇರ ಸೆಟ್‌ಗಳಿಂದ ಕ್ರೊವೇಷ್ಯಾದ ಬೊರ್ನಾ ಕೊರಿಕ್‌ ವಿರುದ್ಧ ಗೆದ್ದರು.

ಬುಧವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್‌ನ ಗಾಯೆಲ್‌ ಮೊಂಫಿಲ್ಸ್‌ 6–7, 7–5, 7–6ರಲ್ಲಿ ಕೀ ನಿಶಿಕೋರಿ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಜರ್ಮನಿಯ ನಾಲ್ಕನೇ ಶ್ರೇಯಾಂಕಿತ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ 6–3, 4–6, 7–6ರಲ್ಲಿ ರಿಚರ್ಡ್‌ ಗ್ಯಾಸ್ಕ್ವೆಟ್‌ ಎದುರೂ, ನಿಕ್‌ ಕಿರ್ಗಿಯೊಸ್‌ 6–1, 6–2ರಲ್ಲಿ ವಿಕ್ಟರ್‌ ಟ್ರೊಯಿಕಿ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.