ADVERTISEMENT

ಯುವರಾಜ್‌ಗೆ ಬೋಲ್ಟ್‌ ಸವಾಲ್!

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ವಿಶ್ವಖ್ಯಾತ ಓಟಗಾರ ಜಮೈಕಾದ ಉಸೇನ್‌ ಬೋಲ್ಟ್‌ , ಭಾರತದ ಕ್ರಿಕೆಟಿಗ ಯುವರಾಜ್‌ ಸಿಂಗ್‌ಗೆ ಸವಾಲೊಡ್ಡುವ ಸಮಯ ಸನ್ನಿಹಿತವಾಗಿದೆ.

ಸೆಪ್ಟೆಂಬರ್‌ 2ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಬೋಲ್ಟ್‌ ಹಾಗೂ ಯುವಿ ಕ್ರಿಕೆಟ್‌ ಆಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ‘ಬೋಲ್ಟ್‌ ಆ್ಯಂಡ್‌ ಯುವಿ–ಬ್ಯಾಟಲ್‌ ಆಫ್‌ ದಿ ಲೆಜೆಂಡ್ಸ್‌’ ಎಂದು ಶೀರ್ಷಿಕೆ ನೀಡಲಾಗಿದೆ.

ಪೂಮಾ ಕಂಪೆನಿಯ ಪ್ರಚಾರ ರಾಯಭಾರಿಗಳಾಗಿರುವ ಯುವಿ ಮತ್ತು ಬೋಲ್ಟ್‌ ಅವರ ಆಟವನ್ನು ಕಣ್ತುಂಬಿಕೊಳ್ಳಲು ಉದ್ಯಾನನಗರಿಯ ಜನತೆ ಈಗ ಕಾತರರಾಗಿದ್ದಾರೆ.

‘ಸೆಪ್ಟೆಂಬರ್‌ 2 ರಂದು ನಡೆಯುವ ಕ್ರಿಕೆಟ್‌ ಆಟದಲ್ಲಿ ಇಬ್ಬರು ದಿಗ್ಗಜ ಕ್ರೀಡಾಪಟುಗಳು  ತಮ್ಮ ಸಾಮರ್ಥ್ಯ ಮೆರೆಯಲಿದ್ದಾರೆ.  ಪೂಮಾ ಕಂಪೆನಿ ಇದೇ ಮೊದಲ ಬಾರಿಗೆ ಯುವಿ ಹಾಗೂ ಬೋಲ್ಟ್‌ ಅವರ ಸಮಾಗಮಕ್ಕೆ ವೇದಿಕೆ ಕಲ್ಪಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.