ADVERTISEMENT

ಯುವಿ ‘ಸಿಕ್ಸರ್‌’ಗೆ ದಶಕದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಯುವರಾಜ್ ಸಿಂಗ್
ಯುವರಾಜ್ ಸಿಂಗ್   

ಬೆಂಗಳೂರು: ಆಲ್‌ರೌಂಡರ್‌ ಯುವರಾಜ್ ಸಿಂಗ್ ಅವರು ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ದಾಖಲೆಗೆ ಮಂಗಳವಾರ ಹತ್ತು ವರ್ಷ ತುಂಬಿತು.

2007ರ ಸೆಪ್ಟೆಂಬರ್‌ 19ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ–20 ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ ಆಡಿದ್ದ ಆಟ ಅಭಿಮಾನಿಗಳ ಮನದಲ್ಲಿನ್ನೂ ಅಚ್ಚಳಿಯದೇ ಉಳಿದಿದೆ. ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಯುವಿ ಸಾಧನೆಯ ನೆನಪುಗಳು ಹರಿದಾಡಿವೆ.

ಆ ಪಂದ್ಯದಲ್ಲಿ ವೇಗಿ ಸ್ಟುವರ್ಟ್‌ ಬ್ರಾಡ್ ಅವರು ಹಾಕಿದ್ದ 19ನೇ ಓವರ್‌ನ ಆರು ಎಸೆತಗಳನ್ನೂ ಯುವಿ ಸಿಕ್ಸರ್‌ಗೆ ಎತ್ತಿದ್ದರು. ಅಲ್ಲದೇ ಕೇವಲ 12 ಎಸೆತಗಳಲ್ಲಿ ಆರ್ಧಶತಕ ದಾಖಲಿಸಿದ್ದರು. ಟ್ವೆಂಟಿ–20 ಕ್ರಿಕೆಟ್‌ನ ಅತ್ಯಂತ ವೇಗದ ಅರ್ಧಶತಕವಾಗಿ ಇಂದಿಗೂ ಉಳಿದಿದೆ. ಆ ಪಂದ್ಯದಲ್ಲಿ ಭಾರತವು 218 ರನ್ ಪೇರಿಸಿತ್ತು. 18 ರನ್‌ಗಳಿಂದ ಜಯಿಸಿತ್ತು.

ADVERTISEMENT

ಅಭ್ಯಾಸಕ್ಕೆ ಮರಳಿದ ಶ್ರೀಜೇಶ್

ಬೆಂಗಳೂರು: ಭಾರತ ಹಾಕಿ ತಂಡದ ನಾಯಕ ಮತ್ತು ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರು ಮಂಗಳವಾರ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್) ಆಭ್ಯಾಸ ನಡೆಸಿದರು. ಗಾಯಗೊಂಡಿದ್ದ ಅವರು ಮೂರು ತಿಂಗಳ ನಂತರ ಅಭ್ಯಾಸಕ್ಕೆ ಮರಳಿದ್ದಾರೆ.

‘ಮತ್ತೆ ಇಂದು ನನ್ನ ಆತ್ಮದೊಳಗೆ (ಗೋಲ್‌ಕೀಪರ್‌ ಪೋಷಾಕು) ಪ್ರವೇಶಿಸಿದ್ದೇನೆ. 90 ದಿನಗಳ ಇಲ್ಲಿಗೆ ಮರಳಿದ್ದೇನೆ’ ಎಂಬ ಒಕ್ಕಣೆಯೊಂದಿಗೆ ತಮ್ಮ ಅಭ್ಯಾಸದ ವಿಡಿಯೋ ತುಣುಕನ್ನು ಶ್ರೀಜೇಶ್ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.