ADVERTISEMENT

ರವಿಚಂದ್ರನ್‌ ಅಶ್ವಿನ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಮುಂಬೈನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ (ಬಲ) ಆರ್‌. ಅಶ್ವಿನ್‌ಗೆ ಪ್ರಶಸ್ತಿ ನೀಡಿದರು ಪಿಟಿಐ ಚಿತ್ರ
ಮುಂಬೈನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ (ಬಲ) ಆರ್‌. ಅಶ್ವಿನ್‌ಗೆ ಪ್ರಶಸ್ತಿ ನೀಡಿದರು ಪಿಟಿಐ ಚಿತ್ರ   

ಮುಂಬೈ: ಸಿಯೆಟ್ ಕ್ರಿಕೆಟ್ ರೇಟಿಂಗ್‌ನ ಅಂತರರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತದ ಆಫ್ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ ಭಾಜನರಾಗಿದ್ದಾರೆ.

ಇಲ್ಲಿನ ಕ್ರಿಕೆಟ್ ಕ್ಲಬ್‌ ಆಫ್ ಇಂಡಿಯಾದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗಾವಸ್ಕರ್‌ ಮತ್ತು ಆರ್‌.ಪಿ.ಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ ಗೋಯೆಂಕಾ ಪ್ರಶಸ್ತಿ ಪ್ರದಾನ ಮಾಡಿದರು.

ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಒಟ್ಟು 13 ಟೆಸ್ಟ್ ಪಂದ್ಯಗಳ ಪೈಕಿ 10ರಲ್ಲಿ ಭಾರತ ಗೆಲುವು ಸಾಧಿಸಲು ಅವರ ಅಮೋಘ ಬೌಲಿಂಗ್ ನೆರವಾಗಿದೆ. ಒಂದು ವರ್ಷದಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಅಶ್ವಿನ್ 99 ವಿಕೆಟ್ ಕಬಳಿಸಿದ್ದಾರೆ.

ADVERTISEMENT

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅಶ್ವಿನ್‌ ‘ಜೀವನದಲ್ಲಿ ನಾನು ಮೊದಲು ಆಟೊಗ್ರಾಫ್ ಪಡೆದದ್ದು ಗಾವಸ್ಕರ್‌ ಅವರಿಂದ. ಚೆಪಾಕ್ ಕ್ರೀಡಾಂಗಣದಲ್ಲಿ ಅವರ ಬಳಿ ಹೋದ ಸಂದರ್ಭ ಈಗಲೂ ನೆನಪಾಗುತ್ತಿದೆ’ ಎಂದರು.

ಐಪಿಎಲ್ ಟೂರ್ನಿಯಲ್ಲಿ ಗಮನ ಸೆಳೆದ ತಮಿಳುನಾಡಿನ ಯುವ ಆಫ್‌ ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಶ್ವಿನ್‌ ‘ವಿಜಯ್‌ ಹಜಾರೆ ಟೂರ್ನಿಯಲ್ಲೂ ವಾಷಿಂಗ್ಟನ್ ಸುಂದರ್‌ ಉತ್ತಮ ಬೌಲಿಂಗ್‌ ಮಾಡಿದ್ದಾರೆ. ಹೊಸ ಚೆಂಡಿ ನಲ್ಲಿ ಬೌಲಿಂಗ್ ಮಾಡುವುದು ಸವಾ ಲಾಗಿರುವ ಟ್ವೆಂಟಿ –20 ಕ್ರಿಕೆಟ್‌ನಲ್ಲೂ ಅವರು ಉತ್ತಮ ಲಯ ಕಂಡುಕೊಂಡಿ ರುವುದು ಗಮನಾರ್ಹ’ ಎಂದರು.

ಶುಭ್‌ಮಾನ್‌ ಗಿಲ್‌ಗೆ ಪ್ರಶಸ್ತಿ: ಯುವ ಬ್ಯಾಟ್ಸ್‌ಮನ್‌ ಶುಭ್‌ಮಾನ್‌ ಗಿಲ್‌ ಅವರಿಗೆ ವರ್ಷದ ಯುವ ಆಟಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.