ADVERTISEMENT

ರಾಜ್‌ಕೋಟ್ ಜೋಡಿ ಮೋಡಿ

ರವೀಂದ್ರ ಜಡೇಜಗೆ ಅಗ್ರಸ್ಥಾನ; ಎರಡನೇ ಸ್ಥಾನಕ್ಕೆ ಚೇತೇಶ್ವರ ಪೂಜಾರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ರಾಜ್‌ಕೋಟ್ ಜೋಡಿ ಮೋಡಿ
ರಾಜ್‌ಕೋಟ್ ಜೋಡಿ ಮೋಡಿ   

ನವದೆಹಲಿ: ಭಾರತದ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಮಂಗಳವಾರ ಬಿಡುಗಡೆ ಮಾಡಿರುವ ನೂತನ ಟೆಸ್ಟ್‌ ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಎರಡನೇ ಸ್ಥಾನಕ್ಕೇರಿದ್ದಾರೆ. ಇದು ರಾಜ್‌ಕೋಟ್‌ನ ಪೂಜಾರ ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆ ಅನಿಸಿದೆ.  ಈ ಮೊದಲು ಜಡೇಜ ಅವರು ಸಹ ಆಟಗಾರ ಆರ್‌. ಅಶ್ವಿನ್‌ ಅವರೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದರು.

ಆಸ್ಟ್ರೇಲಿಯಾ ವಿರುದ್ಧ   ರಾಂಚಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ ಉರುಳಿಸಿ ಮಿಂಚಿದ್ದ ಸೌರಾಷ್ಟ್ರದ ಆಲ್‌ರೌಂಡರ್‌ ಜಡೇಜ,  ಒಟ್ಟು ಪಾಯಿಂಟ್ಸ್‌ ಅನ್ನು 899ಕ್ಕೆ ಹೆಚ್ಚಿಸಿಕೊಂಡು ಅಶ್ವಿನ್‌ ಅವರನ್ನು ಹಿಂದಿಕ್ಕಿದ್ದಾರೆ.

ADVERTISEMENT

ಈ ಮೂಲಕ ಅಗ್ರಪಟ್ಟ ಅಲಂಕರಿಸಿದ ಭಾರತದ ಮೂರನೇ ಸ್ಪಿನ್ನರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಅಶ್ವಿನ್‌ ಮತ್ತು ಬಿಷನ್‌ ಸಿಂಗ್‌ ಬೇಡಿ ಅವರು ಮೊದಲು ಈ ಸಾಧನೆ ಮಾಡಿದ್ದರು. ಪೂಜಾರಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.