ADVERTISEMENT

ರಾಜ್ಯ ಸರ್ಕಾರಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:16 IST
Last Updated 17 ನವೆಂಬರ್ 2017, 20:16 IST
ರಾಜ್ಯ ಸರ್ಕಾರಕ್ಕೆ ನೋಟಿಸ್‌
ರಾಜ್ಯ ಸರ್ಕಾರಕ್ಕೆ ನೋಟಿಸ್‌   

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ನ (ಬಿಟಿಸಿ) ಪರವಾನಗಿ ನವೀಕರಿಸದಿರುವ ಕಾರಣ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿ ಮಾಡಿದೆ.

ಬಿಟಿಸಿಯಲ್ಲಿ ರೇಸಿಂಗ್‌ ಚಟು ವಟಿಕೆ ನಡೆಸಲು ಅನುಮತಿ ಕೋರಿ ಟೆನ್‌ ಹಾರ್ಸ್‌ ಓನರ್ಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ, ಸರ್ಕಾರಕ್ಕೆ ನೋಟಿಸ್‌ ನೀಡಿದ್ದಾರೆ.

‘ಸರ್ಕಾರ ಪರವಾನಗಿ ನವೀ ಕರಿಸಲು ಹಿಂದೇಟು ಹಾಕುತ್ತಿದೆ. ಇದರಿಂದ ರೇಸ್‌ ಚಟುವಟಿಕೆಗಳನ್ನೇ ನಂಬಿದ್ದ ಹಲವು ಮಂದಿಯ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಹಾರ್ಸ್‌ ಓನರ್ಸ್‌, ಅರ್ಜಿ ಯಲ್ಲಿ ವಿವರಿಸಿತ್ತು. ಬಿಟಿಸಿ ಕೂಡ ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿತ್ತು.

ADVERTISEMENT

ತಾನು ಸೂಚಿಸಿದ 50 ಮಂದಿಗೆ ಸದಸ್ಯತ್ವ ನೀಡು ವವರೆಗೂ ಪರವಾನಗಿ ನವೀಕರಿಸುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಸರ್ಕಾರದ ಬೇಡಿಕೆ ಈಡೇರಿಸದಿರಲು ಬಿಟಿಸಿ ಸಭೆ ಯಲ್ಲಿ ತೀರ್ಮಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.