ADVERTISEMENT

ರಾಹುಲ್‌ ದ್ರಾವಿಡ್‌ಗೆ ದ್ರೋಣಾಚಾರ್ಯ, ಕೊಹ್ಲಿಗೆ ಖೇಲ್‌ ರತ್ನ, ಸುನಿಲ್‌ ಗವಾಸ್ಕರ್‌ಗೆ ಧ್ಯಾನ್‌ ಚಂದ್‌ ಪುರಸ್ಕಾರಕ್ಕೆ ಬಿಸಿಸಿಐ ಶಿಫಾರಸು

ಪಿಟಿಐ
Published 26 ಏಪ್ರಿಲ್ 2018, 6:19 IST
Last Updated 26 ಏಪ್ರಿಲ್ 2018, 6:19 IST
ಸುನಿಲ್‌ ಗವಾಸ್ಕರ್‌, ವಿರಾಟ್‌ ಕೊಹ್ಲಿ , ರಾಹುಲ್‌ ದ್ರಾವಿಡ್‌
ಸುನಿಲ್‌ ಗವಾಸ್ಕರ್‌, ವಿರಾಟ್‌ ಕೊಹ್ಲಿ , ರಾಹುಲ್‌ ದ್ರಾವಿಡ್‌   

ಕೋಲ್ಕತ್ತ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರಿಗೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ರಾಜೀವ್‌ ಗಾಂಧಿ ಖೇಲ್‌ ರತ್ನ ಪುರಸ್ಕಾರವನ್ನು ನೀಡುವಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಶಿಫಾರಸು ಮಾಡಿದೆ.

ಕ್ರೀಡಾ ಕ್ಷೇತ್ರದಲ್ಲಿ ತೋರಿದ ಜೀವಮಾನ ಸಾಧನೆಯನ್ನು ಪರಿಗಣಿಸಿ ಖ್ಯಾತ ಆರಂಭಿಕ ಆಟಗಾರ ಸುನಿಲ್‌ ಗವಾಸ್ಕರ್‌ ಅವರಿಗೆ ಧ್ಯಾನ್‌ ಚಂದ್‌ ಪುರಸ್ಕಾರ ನೀಡುವಂತೆ ಬಿಸಿಸಿಐ ಶಿಫಾರಸು ಮಾಡಿದೆ.

ದ್ರೋಣಾಚಾರ್ಯ ಪ್ರಶಸ್ತಿಗಾಗಿ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಶಿಫಾರಸು ಮಾಡಲಾಲಗಿದೆ ಎಂದು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಖಚಿತಪಡಿಸಿದ್ದಾರೆ.

ADVERTISEMENT

‘ಹೌದು, ವಿವಿಧ ವಿಭಾಗಗಳಲ್ಲಿ ಹಲವರ ಹೆಸರುಗಳನ್ನು ಶೀಫಾರಸು ಮಾಡಿ ಸರ್ಕಾರಕ್ಕೆ ಕಳುಹಿಸಿದ್ದೇವೆ. ಬಿಸಿಸಿಐ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ದ್ರೋಣಾಚಾರ್ಯ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ’ ಎಂದು ತಿಳಿಸಿದ್ದಾರೆ.

ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದು ಭಾರತಕ್ಕೆ ಗೌರವ ತಂದುಕೊಟ್ಟ ತಂಡಕ್ಕೆ ತರಬೇತಿ ನೀಡಿ ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ದ್ರಾವಿಡ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಜತೆಗೆ, ಭಾರತ ಎ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ಮತ್ತು ಕಿರಿಯರ ಕ್ರಿಕೆಟ್‌ ನಡುವೆ ಅವರು ಸೇತುವೆಯಾಗಿದ್ದಾರೆ.

ಖೇಲ್‌ ರತ್ನಕ್ಕೆ ವಿರಾಟ್‌ ಕೊಯ್ಲಿ ಅವರ ಹೆಸರನ್ನು ಬಿಸಿಸಿಐ ಎರಡನೇ ಬಾರಿಗೆ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.