ADVERTISEMENT

ರಿಯೋ ಒಲಿಂಪಿಕ್ಸ್ : ನರಸಿಂಗ್ ಯಾದವ್ ಬದಲು ಪ್ರವೀಣ್ ರಾಣಾಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 6:01 IST
Last Updated 27 ಜುಲೈ 2016, 6:01 IST
ರಿಯೋ ಒಲಿಂಪಿಕ್ಸ್ : ನರಸಿಂಗ್ ಯಾದವ್ ಬದಲು ಪ್ರವೀಣ್ ರಾಣಾಗೆ ಸ್ಥಾನ
ರಿಯೋ ಒಲಿಂಪಿಕ್ಸ್ : ನರಸಿಂಗ್ ಯಾದವ್ ಬದಲು ಪ್ರವೀಣ್ ರಾಣಾಗೆ ಸ್ಥಾನ   

ನವದೆಹಲಿ (ಪಿಟಿಐ): ಕುಸ್ತಿ ಪಟು ನರಸಿಂಗ್ ಯಾದವ್ ಅವರು ಉದ್ದೀಪನಾ ಮದ್ದು ಸೇವನೆ ಮಾಡಿರುವುದು ಸಾಬೀತಾಗಿ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ತಪ್ಪಿದ್ದು, ಇದೀಗ ಅವರ ಸ್ಥಾನವನ್ನು ಪ್ರವೀಣ್ ರಾಣಾ ತುಂಬಲಿದ್ದಾರೆ.

ನರಸಿಂಗ್ ಯಾದವ್ ಅವರ ಸ್ಥಾನಕ್ಕೆ ರಾಣ್ ಮತ್ತು ಜಿತೇಂದರ್ ಅವರನ್ನು ಹೆಚ್ಚುವರಿ ಆಟಗಾರರಾಗಿ ಇಟ್ಟುಕೊಳ್ಳಲಾಗಿತ್ತು. ಅದೇ ವೇಳೆ ಸುಶೀಲ್ ಕುಮಾರ್ ಅವರಿಗೆ ಒಲಿಂಪಿಕ್ಸ್ ಅವಕಾಶ ನೀಡುವ ನಿರ್ಧಾರವನ್ನು ತಳ್ಳಿ ಹಾಕಲಾಗಿದೆ.

ಫ್ರೀಸ್ಟೈಲ್ ಕುಸ್ತಿ ಪಟು ಆಗಿರುವ ರಾಣಾ 2014ರಲ್ಲಿ ಅಮೆರಿಕದಲ್ಲಿ ನಡೆದ ಡೇವ್ ಶೆಲೆಜ್ ಮೆಮೊರಿಯಲ್ ಕುಸ್ತಿ ಪಂದ್ಯದ 74 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.


ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ನರಸಿಂಗ್ ಬದಲಿಗೆ ರಾಣಾ ಹೆಸರನ್ನು ಕಳಿಸಿಕೊಡಲಾಗಿದೆ ಎಂದು ಡಬ್ಲ್ಯುಎಫ್ಐ  ಅಧ್ಯಕ್ಷ  ಬ್ರಿಜ್ ಭೂಷಣ ಶರಣ್ ಸಿಂಗ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT