ADVERTISEMENT

ವಿಶ್ವ ಜೂನಿಯರ್ ಸ್ಕ್ವಾಷ್‌

ವಿಶ್ವ ಜೂನಿಯರ್ ಸ್ಕ್ವಾಷ್‌: ಕ್ವಾರ್ಟರ್‌ಗೆ ಭಾರತ ತಂಡ

ಪಿಟಿಐ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ತೌರಂಗ, ನ್ಯೂಜಿಲೆಂಡ್‌: ಭಾರತ ತಂಡ ಡಬ್ಲ್ಯುಎಸ್‌ಎಫ್‌ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿ ಯನ್‌ಷಿಪ್‌ನಲ್ಲಿ ಬುಧವಾರ ಕ್ವಾರ್ಟರ್‌ಫೈನಲ್ ತಲುಪಿದೆ.

ಭಾರತದ ಬಾಲಕಿಯರ ತಂಡ ಗುರುವಾರ ‘ಡಿ’ ಗುಂಪಿನ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಆಡಲಿದೆ.

ಲೀಗ್ ಪಂದ್ಯದಲ್ಲಿ ಭಾರತ 2–1ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದೆ. ಆಶಿತಾ ಹಾಗೂ ಸುನಯಾ ಕುರವಳ್ಳಿ ಗೆಲುವು ದಾಖಲಿಸಿದರು. ಆದರೆ ಉತ್ತಮ ಆರಂಭ ಪಡೆದಿದ್ದ ಅನುಷ್ಕಾ ಸಾಲುಂಕೆ ಪಂದ್ಯದ ಮಧ್ಯೆ ಗಾಯಗೊಂಡ ಕಾರಣ ಆಟದಿಂದ ಹಿಂದೆ ಸರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.