ADVERTISEMENT

ವೋಜ್ನಿಯಾಕಿಗೆ ಆಘಾತ

ಏಜೆನ್ಸೀಸ್
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಕರೊಲಿನಾಗೆ ಸೋಲುಣಿಸಿದ ಮೋನಿಕಾ ಆಟದ ವೈಖರಿ. –ಎಎಫ್‌ಪಿ ಚಿತ್ರ
ಕರೊಲಿನಾಗೆ ಸೋಲುಣಿಸಿದ ಮೋನಿಕಾ ಆಟದ ವೈಖರಿ. –ಎಎಫ್‌ಪಿ ಚಿತ್ರ   

ಮಿಯಾಮಿ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿ ರುವ ಕರೊಲಿನಾ ವೋಜ್ನಿಯಾಕಿ ಹಾಗೂ ಇಂಡಿಯಾನಾ ವೇಲ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ನವೊಮಿ ಒಸಾಕ ಅವರು ಮಿಯಾಮಿ ಓಪನ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವೋಜ್ನಿಯಾಕಿ 6–0, 4–6, 4–6ರಲ್ಲಿ ಪೆಟ್ರೊ ರಿಕಾದ ಮೋನಿಕಾ ಪುಗ್ ಎದುರು ಸೋತರು.

ಒಸಾಕ 4–6, 2–6ರಲ್ಲಿ ನಾಲ್ಕನೇ ಶ್ರೇಯಾಂಕದ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅವರಿಗೆ ಮಣಿದರು.

ADVERTISEMENT

ವೀನಸ್‌ಗೆ ಜಯ: ಏಳು ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳ ಒಡತಿ ಅಮೆರಿಕದ ವೀನಸ್‌ ವಿಲಿಯಮ್ಸ್‌ 7–5, 6–4ರಲ್ಲಿ ನತಾಲಿಯಾ ಅವರನ್ನು ಮಣಿಸಿದರು. ರಷ್ಯಾದ ನತಾಲಿಯಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 88ನೇ ಸ್ಥಾನದಲ್ಲಿ ಇದ್ದಾರೆ. ಒಂಬತ್ತನೇ ಶ್ರೇಯಾಂಕದ ಜೆಕ್‌ ಗಣರಾಜ್ಯದ ಆಟಗಾರ್ತಿ ಪೆಟ್ರಾ ಕ್ವಿಟೋವಾ 7–5, 3–6, 6–3ರಲ್ಲಿ ಬೆಲಾರಸ್‌ನ ಆರ್ಯನಾ ಸೆಬಾಲೆಂಕಾ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.