ADVERTISEMENT

ಶೇನ್‌ ವಾರ್ನ್‌ ಹೇಳಿಕೆಗೆ ಸ್ಟೀವ್‌ ವಾ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾದ ಮಾಜಿ ಲೆಗ್‌ಸ್ಪಿನ್ನರ್‌ ಶೇನ್‌ ವಾರ್ನ್‌ ಅವರು ತಮ್ಮನ್ನು ಸ್ವಾರ್ಥಿ ಎಂದು ಕರೆದಿರುವುದಕ್ಕೆ ಮಾಜಿ ನಾಯಕ ಸ್ಟೀವ್‌ ವಾ ತಿರುಗೇಟು ನೀಡಿದ್ದಾರೆ.

‘1999ರ ಟೆಸ್ಟ್‌ ತಂಡದಲ್ಲಿ ನಾನು ನಾಯಕತ್ವದ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಿದ್ದೇನೆ. ಸಮರ್ಥಿಸಿಕೊಳ್ಳುವ ಉದ್ದೇಶ ನನಗಿಲ್ಲ. ಆದರೆ ವಾರ್ನ್‌ ಅವರನ್ನು ತಂಡದಿಂದ ಕೈಬಿಡುವುದು ಆ ಸಂದರ್ಭದಲ್ಲಿ ನನಗೆ ಕಠಿಣ ನಿರ್ಧಾರ ಆಗಿತ್ತು’ ಎಂದು ಸ್ಟೀವ್‌ ವಾ ಪ್ರತಿಕ್ರಿಯಿ ಸಿದ್ದಾರೆ.

‘ಶೇನ್‌ ವಾರ್ನ್ ಅವರನ್ನು ಮಾತ್ರ ಅಲ್ಲ. ಯಾವುದೇ ಆಟಗಾರನನ್ನು ತಂಡದಿಂದ ಕೈಬಿಡುವುದು ಸುಲಭದ ನಿರ್ಧಾರ ಆಲ್ಲ’ ಎಂದು ಅವರು ಹೇಳಿದ್ದಾರೆ.

‘ಆ್ಯಡಮ್‌ ಡೇಲ್‌, ಗ್ರೆಗ್‌ ಬ್ಲೆವೆಟ್‌ ಕೂಡ ಉತ್ತಮ ಆಟಗಾರರು. ನೀವು ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಅವರಿಗೆ ಹೇಳುವುದು ಕಷ್ಟದ ಕೆಲಸ. ಆದರೂ ಅವರು ನಾನು ಹೇಳಿದಾಗ ಒಪ್ಪಿಕೊಳ್ಳುತ್ತಿದ್ದರು’ ಎಂದರು.

‘ತಂಡದ ಗೆಲುವಿಗಾಗಿ ನಾಯಕನಾದವನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದೇ ಜನರು ಬಯಸುತ್ತಾರೆ’ ಎಂದು ವಾ ಹೇಳಿದ್ದಾರೆ.

1999ರಲ್ಲಿ ನಡೆದ ವೆಸ್ಟ್‌ಇಂಡೀಸ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದ ಸಂಗತಿಯನ್ನು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ್ದ ಶೇನ್‌ ವಾರ್ನ್‌ ಅವರು ‘ಸ್ವೀವ್‌ ವಾ ಅವರು ನಾನು ಕಂಡ ಅತ್ಯಂತ ಸ್ವಾರ್ಥಿ ಕ್ರಿಕೆಟಿಗ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.