ಬ್ಯಾಂಕಾಕ್ : ಭಾರತದ ಐದು ಮಂದಿ ಬಾಕ್ಸರ್‌ಗಳು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಅನಾಮಿಕ ಮತ್ತು ಆಸ್ತಾ ಫಾವಾ ಅವರು ಅಕ್ಟೋಬರ್ 6ರಿಂದ 18ರವರೆಗೆ ಅರ್ಜೆಂಟೀನಾದಲ್ಲಿ ನಡೆಯುವ ಯೂತ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಸಾಧ್ಯತೆ ಇದೆ.
51 ಕೆ.ಜಿ. ವಿಭಾಗದಲ್ಲಿ ‘ರಿಂಗ್’ಗೆ ಇಳಿದಿದ್ದ ಅನಾಮಿಕ, ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ಮುಂಗಾನ್‌ಸರನ್ ಬಾಲಸಾನ್ ಅವರನ್ನು ಸೋಲಿಸಿದರು. 75 ಕೆ.ಜಿ. ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಆಸ್ತಾ, ಚೀನಾದ ಕ್ಸಿಯು ವಾಂಗ್ ವಿರುದ್ಧ ಗೆದ್ದರು.
69 ಕೆ.ಜಿ ವಿಭಾಗದಲ್ಲಿಸ್ಪರ್ಧಿಸಿದ್ದ ಲಲಿತಾ, ಕ್ವಾರ್ಟರ್ ಫೈನಲ್‌ನಲ್ಲಿ ವಿಯೆಟ್ನಾಂ ದೇಶದ ಥಿ ಜಿಯಾಂಗ್ ಟ್ರಾನ್ ಅವರನ್ನು ಮಣಿಸಿದರು.
54 ಕೆ.ಜಿ. ವಿಭಾಗದಲ್ಲಿ ದಿವ್ಯಾ ಪವಾರ್, ಚೀನಾದ ಕ್ಸುಯೆಕ್ವಿಂಗ್ ಕಾವೊ ವಿರುದ್ಧ ವಿಜಯಿಯಾದರು.
48 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ನೀತು ಸಿಂಗ್ ಅವರು ಚೀನಾದ ಜಿಫೆಯಿ ಹು ಅವರನ್ನು ಸೋಲಿಸಿದರು.
57ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಸಾಕ್ಷಿ ಚೌಧರಿ, ಥಾಯ್ಲೆಂಡ್‌ನ ಪನ್‌ಪಚಾರ ಸೊಮನುಯೆಕ್ ವಿರುದ್ಧ ಸೋತರು.
60 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಜೋನಿ, 2–3ರಿಂದ ಕಜಕಸ್ತಾನದ ಮರಿಯಾ ಗ್ಲಾಡ್‌ಕೊವಾ ವಿರುದ್ಧ ಪರಾಭವಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.