ADVERTISEMENT

ಸ್ಕ್ವಾಷ್ : ದೀಪಿಕಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಚೆನ್ನೈ (ಪಿಟಿಐ): ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಭರವಸೆಯ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ಮತ್ತು ಹರೀಂದರ್‌ ಪಾಲ್‌ ಸಂಧು ಇಲ್ಲಿ ನಡೆದ ಜೆಎಸ್‌ಡಬ್ಲ್ಯು ಚಾಲೆಂಜರ್‌ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು.

ಬುಧವಾರ ನಡೆದ ಮಹಿಳಾ ವಿಭಾಗದ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ದೀಪಿಕಾ 11–6, 11–2, 11–8ರಲ್ಲಿ ಜಪಾನ್‌ನ ಮಿಸಾಕಿ ಕೊಬಾಯಿಷಿ ಅವರನ್ನು ಮಣಿಸಿದರು.

ಇಂಚೆನ್‌ ಏಷ್ಯನ್‌ ಕೂಟದ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಚಂಡೀಗಡದ ಹರೀಂದರ್‌ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 11–8, 11–3, 11–6ರಲ್ಲಿ ಈಜಿಪ್ಟ್‌ನ ಕರೀಮ್‌ ಅಲಿ ಫಾತಿ ಅವರನ್ನು ಮಣಿಸಿದರು. ‘ಹಿಂದೊಮ್ಮೆ ಮಿಸಾಕಿ ಎದುರು ಸೋಲು ಕಂಡಿದ್ದೆ. ಆದ್ದರಿಂದ
ಎದುರಾಳಿ ಆಟಗಾರ್ತಿಯನ್ನು ಹಗುರ­ವಾಗಿ ಪರಿಗಣಿಸಿರಲಿಲ್ಲ. ಇಲ್ಲಿ ಪ್ರಶಸ್ತಿ ಜಯಿಸಿದ್ದು ಖುಷಿ ನೀಡಿದೆ’ ಎಂದು ದೀಪಿಕಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.