ADVERTISEMENT

ಹಾಕಿ: ಕಳಿಂಗ ತಂಡಕ್ಕೆ ಜಯ

ಪಿಟಿಐ
Published 22 ಜನವರಿ 2017, 19:56 IST
Last Updated 22 ಜನವರಿ 2017, 19:56 IST

ಭುವನೇಶ್ವರ : ಗುರ್ಜಿಂದರ್‌ ಸಿಂಗ್‌ ತಂದಿತ್ತ ಏಕೈಕ ಗೋಲಿನ ಬಲದಿಂದ ಕಳಿಂಗ ಲ್ಯಾನ್ಸರ್ಸ್‌ ತಂಡ ಹಾಕಿ ಇಂಡಿಯಾ ಲೀಗ್‌ ಐದನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಕಳಿಂಗ ತಂಡ 1–0 ಗೋಲಿನಿಂದ ದೆಹಲಿ ವೇವ್‌ರೈಡರ್ಸ್‌ ತಂಡವನ್ನು ಪರಾಭವಗೊಳಿಸಿತು.

ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿದಿದ್ದ ಕಳಿಂಗ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಇನ್ನೊಂದೆಡೆ ದೆಹಲಿ ಕೂಡಾ ದಿಟ್ಟ ಆಟ ಆಡಿತು. ಹೀಗಾಗಿ ಮೊದಲ ಮೂರು ಕ್ವಾರ್ಟರ್‌ಗಳ ಆಟ ಗೋಲು ರಹಿತವಾಗಿತ್ತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗುರ್ಜಿಂದರ್‌ ಚೆಂಡನ್ನು ಗುರಿ ಮುಟ್ಟಿಸಿ ಮಿಂಚಿದರು. ಇದರಿಂದ ತಂಡದ ಗೆಲುವು ಸುಲಭವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.