ADVERTISEMENT

ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 29 ಮೇ 2018, 20:02 IST
Last Updated 29 ಮೇ 2018, 20:02 IST
ಸತೀಶ್ ಪಾಲ್
ಸತೀಶ್ ಪಾಲ್   

ಬೆಂಗಳೂರು: ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪಾಲ್ (52) ಮಂಗಳವಾರ ನಿಧನರಾದರು.

ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು, ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ.

ಸತೀಶ್ ಅವರು ಸುಮಾರು 27 ವರ್ಷಗಳ ಕಾಲ ರಾಷ್ಟ್ರದ ಪ್ರಮುಖ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಮೃತರ ಅಂತ್ಯ ಕ್ರಿಯೆಯು ಬುಧವಾರ ಸಂಜೆ 4 ಗಂಟೆಗೆ ಹೊಸೂರು ರಸ್ತೆಯಲ್ಲಿರುವ ಸಿಮೆಟ್ರಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.