ADVERTISEMENT

ಚೆಸ್‌: ಆನಂದ್–ಕಾರ್ಲ್‌ಸನ್‌ ಮುಖಾಮುಖಿ

ಪಿಟಿಐ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ವಿಶ್ವನಾಥನ್ ಆನಂದ್ (ಗೂಗಲ್ ಚಿತ್ರ)
ವಿಶ್ವನಾಥನ್ ಆನಂದ್ (ಗೂಗಲ್ ಚಿತ್ರ)   

ವಿಕ್‌ ಆನ್‌ ಜೀ, ನೆದರ್ಲೆಂಡ್ಸ್‌: ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನಲ್ಲಿ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಎದುರು ಆಡಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಕಾರ್ಲ್‌ಸನ್ ಅಗ್ರಸ್ಥಾನದಲ್ಲಿ ಇದ್ದಾರೆ. ನಾರ್ವೆಯ ಆಟಗಾರನ ಎದುರು ಸೋತಿದ್ದ ಆನಂದ್ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ಕಳೆದುಕೊಂಡಿದ್ದರು.

ಎರಡು ಪಂದ್ಯದಲ್ಲಿ ಗೆಲುವು, ಒಂದರಲ್ಲಿ ಸೋಲು ಹಾಗೂ ಐದರಲ್ಲಿ ಡ್ರಾ ಮಾಡಿಕೊಂಡಿರುವ ಆನಂದ್ ಆರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.