ಜಕಾರ್ತಾ (ಪಿಟಿಐ): ಭಾರತ ಮಹಿಳಾ ವಾಲಿಬಾಲ್ ತಂಡವು ಏಷ್ಯನ್ಕ್ರೀಡಾಕೂಟದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಯಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ 25–18, 25–16 ಹಾಗೂ 25–13 ರಿಂದಹಾಂಕಾಂಗ್ ವಿರುದ್ಧ ಜಯಸಿತು. ತಂಡಕ್ಕೆ ನಾಕೌಟ್ ಹಂತಕ್ಕೆ ಏರಲು ಸಾಧ್ಯವಾಗದ ಕಾರಣ ಈ ಪಂದ್ಯದ ಫಲಿತಾಂಶ
ಮಹತ್ವದ್ದಾಗಿರಲಿಲ್ಲ.
ಮಂಗಳವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಭಾರತ ತಂಡವು 25–21, 21–25, 23–25, 7–12 ರಿಂದ ಪಾಕಿಸ್ತಾನ ತಂಡದ ವಿರುದ್ಧ ಪರಾಭವಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.