ADVERTISEMENT

ಕಂಪ್ಯೂಟರ್: ಅತಿಯಾದರೆ ಅನಾಹುತ!

ಪ್ರಜಾವಾಣಿ ವಿಶೇಷ
Published 30 ಅಕ್ಟೋಬರ್ 2012, 19:30 IST
Last Updated 30 ಅಕ್ಟೋಬರ್ 2012, 19:30 IST

ಅಮೃತವೂ ಅತಿಯಾದರೆ ವಿಷ. ಈ ನಾಣ್ಣುಡಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಅನ್ವಯಿಸುತ್ತಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ಧೃಡಪಡಿಸಿವೆ. 

ವಿಡಿಯೋ, ಕಂಪ್ಯೂಟರ್ ಗೇಮ್ಸನ ವಿಪರೀತ ಬಳಕೆಯು ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರಿದರೆ, ಲ್ಯಾಪ್‌ಟಾಪ್, ಮೊಬೈಲ್, ಐಫೋನ್‌ಗಳ ಬಳಕೆ ವಯಸ್ಕರಲ್ಲಿ ಖಿನ್ನತೆ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎನ್ನುತ್ತಾರೆ ಮೆಲ್ಬರ್ನಿನ ರಾಯಲ್ ಮಕ್ಕಳ ಆಸ್ಪತ್ರೆಯ ಪ್ರೊಫೆಸರ್ ಜಾರ್ಜ್ ಪ್ಯಾಟನ್.

ಮಕ್ಕಳು ಇಡೀ ದಿನ ಕಂಪ್ಯೂಟರ್ ಮುಂದೆ ಕೂರುವುದರಿಂದ ವೆುದುಳಿನ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೇ, ಭಾವನಾತ್ಮಕ ಸಂಬಂಧಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು. ಭವಿಷ್ಯದಲ್ಲಿ ಇದು ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗಂಡ-ಹೆಂಡತಿ-ಮಕ್ಕಳು ಹೀಗೆ ಮಾನವ ಸಂಬಂಧಗಳ ಭಾವಾನಾತ್ಮಕ ಸಂಪರ್ಕಕ್ಕೆ ತೊಡಕಾಗುತ್ತದೆ ಎಂಬುದು ಇವರ ವಿಶ್ಲೇಷಣೆ.

ಕಂಪ್ಯೂಟರ್ ಮುಂದೆ ಕುಳಿತು ಏಕಕಾಲದಲ್ಲಿ ಬಹು ಬಗೆಯ ಕೆಲಸ ನಿರ್ವಹಿಸುವರಿಗೆ (ಮಲ್ಟಿಟಾಸ್ಕಿಂಗ್) ಹಾಗೂ ಫೇಸ್‌ಬುಕ್ ಗೀಳು ಅಂಟಿಸಿಕೊಂಡವರಲ್ಲಿ ಮಾನಸಿಕ ಸಮಸ್ಯೆಗಳು ಉಂಟಾಗುವುದು ಈಗಾಗಲೇ ಖಚಿತಗೊಂಡಿವೆ ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸುತ್ತಿರುವ ಕ್ಯಾಲಿಫೋರ್ನಿಯಾದ ಮೂಲದ ಮನಶಾಸ್ತ್ರಜ್ಞೆಯೊಬ್ಬರು.

ವಿದ್ಯುನ್ಮಾನ ಮಾಧ್ಯಮಗಳಿಗೆ ದಾಸರಾದಲ್ಲಿ ಭವಿಷ್ಯದ ಜನಾಂಗವು Disorders   ಎಂಬ ವಿಶಿಷ್ಟ ಬಗೆಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಾರೆ. ಅಷ್ಟೇ ಅಲ್ಲ, ಇದರಿಂದಾಗಿ ವ್ಯಕ್ತಿತ್ವದಲ್ಲಿನ ದೋಷಗಳು, ಭಯ ಮೊದಲಾದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ಅವರು ಹೇಳುತ್ತಾರೆ. ವಾಸ್ತವಿಕ ಜಗತ್ತಿನಲ್ಲಿ ಸಂಬಂಧಗಳನ್ನು ನಿಭಾಯಿಸುವಲ್ಲಿ ಇಂತಹವರು ಖಂಡಿತ ಸೋಲುತ್ತಾರೆ ಎಂಬುದು ಅವರ ವಿವರಣೆ.

ವಿಡಿಯೋ ಗೇಮ್‌ಗಳ ಅತಿಯಾದ ಬಳಕೆಯಿಂದ ಮೆದುಳಿನಲ್ಲಿ ಡೊಪಮೈನ್ ಎಂಬ ದ್ರವ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ಮನಸ್ಸೇನೋ ಆಹ್ಲಾದಗೊಳ್ಳುತ್ತದೆ. ಆದರೆ,  ಇದು ಮತ್ತೆ ವಿಡಿಯೋ ಗೇಮ್ ಚಟಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಪರಿಣಾಮ ವ್ಯಕ್ತಿ ಸಿಗರೇಟ್‌ಗೆ ದಾಸನಾದಂತೆ ಇದರ ವ್ಯಸನಿಯಾಗಿಬಿಡುತ್ತಾನೆ ಎನ್ನುತ್ತಾರೆ ತಜ್ಞರು.
 

ಕಾದಿದೆ ಆಪತ್ತು!

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯು ಕ್ರಮೇಣ ಮುಖಾಮುಖಿ ಭೇಟಿಯನ್ನು ಕುಗ್ಗಿಸಿ ಕಂಪ್ಯೂಟರಿನ ಪರದೆ ಮೇಲೆಯೇ ಭೇಟಿಯಾಗುವಂತೆ ಪ್ರೇರೇಪಿಸುತ್ತದೆ.

ಮುಖತ: ಭೇಟಿಯಾದಾಗ ಇರುವಂತಹ ಲವಲವಿಕೆ, ಕೈಕುಲುಕುವಿಕೆ, ಮುಗುಳ್ನಗು ಇವೆಲ್ಲಾ ವ್ಯಕ್ತಿಯ ಅರಿಯುವಿಕೆಗೆ ಸಹಕಾರಿ. ಆದರೆ ಆನ್‌ಲೈನ್ ಭೇಟಿಯಲ್ಲಿ ಇವೆಲ್ಲಾ ಇಲ್ಲವಾಗಿ ಸಂಪೂರ್ಣವಾಗಿ ಕೃತಕವಾಗಿ ಮನುಷ್ಯ ಮನುಷ್ಯರ ನಡುವಿನ ಹೊಂದಾಣಿಕೆಗೆ ಇದು ಅಡ್ಡಿಯಾಗುತ್ತದೆ. ಇದು ಮನು ಕುಲಕ್ಕೆ ಹವಾಮಾನ ವೈಪರೀತ್ಯಕ್ಕಿಂತ ಅತಿ ದೊಡ್ಡ ಕೆಡುಕು ಎಂಬುದು ಆಕ್ಸಫರ್ಡ್ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಸೂಸನ್ ಗ್ರೀನ್‌ಪೀಲ್ಡ್ ಅಭಿಪ್ರಾಯ.

ADVERTISEMENT

ಯೋಗ ಧಾನ್ಯಕ್ಕೆ ಮೊರೆ

ಫೇಸ್‌ಬುಕ್‌ನ ಉನ್ನತಾಧಿಕಾರಿ ಸ್ಟುವರ್ಟ್ ಕ್ರಾಬ್ ಕೂಡ ಕಂಪ್ಯೂಟರ್‌ನ ಅತಿಯಾದ ಬಳಕೆಯಿಂದಾಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಾ ದಿನಕ್ಕೊಮ್ಮೆಯಾದರೂ ಅಂತರ್ಜಾಲದಿಂದ ದೂರವಿರಿ ಹಾಗೂ ಕಂಪ್ಯೂಟರ್ ಆರಿಸಿರಿ ಎಂಬ ಸಲಹೆ ನೀಡುತ್ತಾರೆ.
 
ಹಲವು ಕಾರ್ಪೊರೇಟ್ ಸಂಸ್ಥೆಗಳು ಈ ಕುರಿತು ನಿಗಾ ವಹಿಸುತ್ತಿವೆ. ಇತ್ತೀಚೆಗೆ ನಡೆದ ವಿಸ್ಡಂ 2.0 ಸಮಾವೇಶದಲ್ಲಿ ಭಾಗವಹಿಸಿದ್ದ ಫೇಸ್‌ಬುಕ್, ಟ್ವಿಟರ್, ಇ-ಬೇ. ಜಿಂಗಾ,  ಪೇ ಪಾಲ್, ಗೂಗಲ್, ಮೈಕ್ರೋಸಾಫ್ಟ್ ಹಾಗೂ ಸಿಸ್ಕೋದ ಉದ್ಯಮಿಗಳು ಯೋಗ ಹಾಗೂ ಧ್ಯಾನದ ಪರಿಣತರೊಂದಿಗೆ ಚರ್ಚೆ ನಡೆಸಿದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.