ADVERTISEMENT

ಪಿಡಿಎಫ್‌ ಫೈಲ್‌ ರಚಿಸಲು ಸರಳ ಮಾರ್ಗ

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 23 ನವೆಂಬರ್ 2016, 19:30 IST
Last Updated 23 ನವೆಂಬರ್ 2016, 19:30 IST

ಪಿಡಿಎಫ್‌ ಫೈಲ್‌ ಕ್ರಿಯೇಟ್‌ ಮಾಡಬೇಕೆಂದ ಸಂದರ್ಭಗಳಲ್ಲಿ ತಮ್ಮ ಪಿಸಿ ಅಥವಾ ಮೊಬೈಲ್‌ನಲ್ಲಿರುವ ಯಾವುದಾದರೊಂದು ಪಿಡಿಎಫ್‌ ಕ್ರಿಯೇಟರ್‌ ಸಾಫ್ಟ್‌ವೇರ್‌/ಆ್ಯಪ್‌ ನೆರವು ಪಡೆಯುವುದು ಸಾಮಾನ್ಯ ಅಭ್ಯಾಸ. ಹೀಗೆ ಪಿಡಿಎಫ್‌ ಫೈಲ್‌ ರಚಿಸುವ ಬಹುತೇಕ ಉಚಿತ ಸಾಫ್ಟ್‌ವೇರ್‌ಗಳು ಫೈಲ್‌ನ ಪ್ರತಿ ಪುಟದ ಕೆಳಗೆ ತಮ್ಮ ಲೋಗೊ ಅಥವಾ ಕ್ರಿಯೇಟರ್‌ ಮಾರ್ಕ್‌ ಉಳಿಸುವುದು ಮಾಮೂಲು. ಆದರೆ, ಹೀಗೆ ಕ್ರಿಯೇಟರ್‌ ಮಾರ್ಕ್‌ ಇಲ್ಲದಂತೆ ಉಚಿತ ಸಾಫ್ಟ್‌ವೇರ್‌ ಮೂಲಕವೇ ಪಿಡಿಎಫ್‌ ಫೈಲ್‌ ರಚಿಸಬಹುದು. ಇಂಥ ಹಲವು ಸಾಫ್ಟ್‌ವೇರ್‌ಗಳಿವೆ. ಇಂಥ ಸಾಫ್ಟ್‌ವೇರ್‌ಗಳಲ್ಲಿ ಓಪನ್‌ ಆಫೀಸ್‌ (OpenOffice) ಸಾಫ್ಟ್‌ವೇರ್‌ ಕೂಡ ಒಂದು. ಈ ಸಾಫ್ಟ್‌ವೇರ್‌ನಿಂದ ಸರಳ ಮಾರ್ಗದ ಮೂಲಕ ಪಿಡಿಎಫ್‌ ಫೈಲ್‌ ರಚಿಸಬಹುದು.

ಮೊದಲು ಓಪನ್‌ ಆಫೀಸ್‌ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಂಡು ಅದನ್ನು ನಿಮ್ಮ ಸಿಸ್ಟಮ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಿ. ಬಳಿಕ ಟೆಕ್ಸ್ಟ್‌ ಡಾಕ್ಯುಮೆಂಟ್‌ ತೆರೆಯಿರಿ. ಇಲ್ಲಿ ನಿಮಗೆ ಬೇಕಾದ ಅಳತೆಯ ಟೆಕ್ಸ್ಟ್‌ ಫೈಲ್‌ ಪೇಜ್‌ ಆಯ್ಕೆ ಮಾಡಿಕೊಳ್ಳಿ. ಆ ಫೈಲ್‌ಗೆ ನಿಮ್ಮ ಟೆಕ್ಸ್ಟ್‌ ಹಾಕಿ ಅಕ್ಷರ ವಿನ್ಯಾಸ, ಪುಟ ವಿನ್ಯಾಸ ರೂಪಿಸಿಕೊಂಡು Export as PDF ಕ್ಲಿಕ್ಕಿಸಿದರೆ ಕ್ಷಣಾರ್ಧದಲ್ಲೇ ಪಿಡಿಎಫ್‌ ಫೈಲ್‌ ರಚನೆಯಾಗುತ್ತದೆ.

ಹೀಗೆ ಓಪನ್‌ ಆಫೀಸ್‌ ಮೂಲಕ ರಚನೆಯಾದ ಪಿಡಿಎಫ್‌ ಫೈಲ್‌ನಲ್ಲಿ ಪಿಡಿಎಫ್‌ ಕ್ರಿಯೇಟರ್‌ ಮಾರ್ಕ್ ಉಳಿಯುವುದಿಲ್ಲ. ಟೆಕ್ಸ್ಟ್‌ ಮಾತ್ರವಲ್ಲದೆ ಫೋಟೊ, ಗ್ರಾಫಿಕ್ಸ್‌, ಚಾರ್ಟ್‌ಗಳನ್ನೂ ಹೀಗೆ ಪಿಡಿಎಫ್‌ ಫೈಲ್‌ ಆಗಿ ರೂಪಾಂತರ ಮಾಡಬಹುದು. ಟೆಕ್ಸ್ಟ್‌ ಡಾಕ್ಯುಮೆಂಟ್‌ ಫೈಲ್‌ ಮೂಲಕ ಮಾತ್ರವಲ್ಲದೆ ಓಪನ್‌ ಆಫೀಸ್‌ನ ಸ್ಪ್ರೆಡ್‌ಷೀಟ್‌, ಪ್ರೆಸೆಂಟೇಷನ್‌, ಡ್ರಾಯಿಂಗ್‌, ಡೇಟಾಬೇಸ್‌, ಫಾರ್ಮುಲ, ಟೆಂಪ್ಲೇಟ್‌ಗಳನ್ನೂ ಬಳಸಬಹುದು. ಈ ಫೈಲ್‌ಗಳ ಮೂಲಕವೂ ಪಿಡಿಎಫ್‌ ರಚಿಸಬಹುದು.

ಓಪನ್‌ ಆಫೀಸ್‌ ಮೂಲಕ ಪಿಡಿಎಫ್‌ ಆಗಿ ಪರಿವರ್ತನೆಯಾದ ಮೂಲ ಡಾಕ್ಯುಮೆಂಟ್‌ ಫೈಲ್‌ಗಳನ್ನು ಅವುಗಳ ಮೂಲ ರೂಪದಲ್ಲಿಯೂ ಉಳಿಸಿಕೊಳ್ಳಬಹುದು. ಈ ಫೈಲ್‌ಗಳನ್ನು ಬೇಕೆಂದಾಗ ತಿದ್ದಿ ಅಗತ್ಯವಿದ್ದರೆ ಮತ್ತೆ ಪಿಡಿಎಫ್‌ ಫೈಲ್‌ ರಚಿಸಿಕೊಳ್ಳಬಹುದು. ಪಿಡಿಎಫ್‌ ಫೈಲ್‌ ರಚಿಸಲು ಪ್ರಯಾಸ ಪಡುವವರಿಗೆ ಓಪನ್‌ ಆಫೀಸ್‌ ಅನುಕೂಲಕರ. ಉಚಿತವಾಗಿ ದೊರೆಯುವ ಈ ಸಾಫ್ಟ್‌ವೇರ್‌ ಅನ್ನು ನೀವೂ ಒಮ್ಮೆ ಬಳಸಿ, ಲೋಗೊ, ಕ್ರಿಯೇಟರ್‌ ಮಾರ್ಕ್‌ ಇಲ್ಲದಂಥ ಪಿಡಿಎಫ್‌ ಫೈಲ್‌ ಅನ್ನು ರಚಿಸಿ. ಓಪನ್ ಆಫೀಸ್ ಡೌನ್‌ಲೋಡ್‌ ಮಾಡಿಕೊಳ್ಳಲು ಈ ಲಿಂಕ್‌ ಬಳಸಿ:http://bit.ly/1bVV15B

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.