ADVERTISEMENT

ಸೆಂಟ್‌ ಐಟಮ್ಸ್‌ ನಿರ್ವಹಣೆ

ದಯಾನಂದ ಎಚ್‌.ಎಚ್‌.
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಸೆಂಟ್‌ ಐಟಮ್ಸ್‌ ನಿರ್ವಹಣೆ
ಸೆಂಟ್‌ ಐಟಮ್ಸ್‌ ನಿರ್ವಹಣೆ   

ಇಮೇಲ್‌ ಬಳಕೆಯ ವಿಷಯ ಬಂದಾಗಲೆಲ್ಲಾ ಇನ್‌ಬಾಕ್ಸ್‌ ನಿರ್ವಹಣೆ ಕಡೆಗೆ ಗಮನ ಕೊಡುವುದು ಹೆಚ್ಚು. ಆದರೆ, ಇಮೇಲ್‌ ನಿರ್ವಹಣೆಯಲ್ಲಿ ಸೆಂಟ್‌ ಐಟಮ್ಸ್‌ ನಿರ್ವಹಣೆಯೂ ಮುಖ್ಯವಾಗುತ್ತದೆ. ಕಳಿಸಿರುವ ಮೇಲ್‌ಗಳೆಲ್ಲವನ್ನೂ ಸೆಂಟ್‌ ಬಾಕ್ಸ್‌ನಲ್ಲಿ ತುಂಬಿಕೊಳ್ಳುವ ಅಗತ್ಯವಿಲ್ಲ. ಹೀಗಾಗಿ ಸೆಂಟ್‌ ಮೇಲ್‌ಗಳನ್ನು ನಿರ್ವಹಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು.

ಸಾಮಾನ್ಯವಾಗಿ ಬಹುತೇಕರ ಮೇಲ್‌ನಲ್ಲಿ ಅವರು ಮೇಲ್‌ ಐಡಿ ಕ್ರಿಯೇಟ್‌ ಮಾಡಿದಾಗಿನಿಂದ ಈವರೆಗಿನ ಸೆಂಟ್‌ ಮೇಲ್‌ಗಳು ಈಗಲೂ ಉಳಿದುಕೊಂಡಿರುತ್ತವೆ. ಸೆಂಟ್‌ ಮೇಲ್‌ಗಳನ್ನು ಡಿಲೀಟ್‌ ಮಾಡುವ ಅಭ್ಯಾಸ ಬಹುತೇಕರಿಗೆ ಇರುವುದಿಲ್ಲ. ಹೀಗಾಗಿ ಸೆಂಟ್‌ ಬಾಕ್ಸ್‌ನಲ್ಲೂ ಸಾಕಷ್ಟು ಕಸದ ರಾಶಿ ನಿರ್ಮಾಣವಾಗಿರುತ್ತದೆ. ಈ ಕಸವನ್ನೂ ಆಗಾಗ ಖಾಲಿ ಮಾಡಬೇಕಾಗುತ್ತದೆ.

ಅತಿ ಮುಖ್ಯವೆನಿಸುವ ಹಾಗೂ ಇತ್ತೀಚಿನ ಸೆಂಟ್‌ ಮೇಲ್‌ಗಳನ್ನು ಸೆಂಟ್‌ ಬಾಕ್ಸ್‌ನಲ್ಲಿ ಉಳಿಸಿಕೊಂಡರೆ ಸಾಕು. ವರ್ಷಗಟ್ಟಲೆ ಹಳೆಯ ಸೆಂಟ್‌ ಮೇಲ್‌ಗಳು ಹೆಚ್ಚು ಪ್ರಯೋಜನಕ್ಕೆ ಬಾರವು. ಹಳೆಯ ಸೆಂಟ್‌ ಮೇಲ್‌ಗಳನ್ನು ಡಿಲೀಟ್‌ ಮಾಡುವ ಮುನ್ನ ಸೆಂಟ್‌ ಐಟಮ್ಸ್‌ನಲ್ಲಿ ಮುಖ್ಯವೆನಿಸುವ ಅಟ್ಯಾಚ್‌ಮೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಒಳಿತು. ಇದರಿಂದ ಡೇಟಾ ಕೈತಪ್ಪಿ ಹೋಗುವ ಅಪಾಯದಿಂದ ಪಾರಾಗಬಹುದು.

ADVERTISEMENT

ಅಷ್ಟು ಮಾತ್ರವಲ್ಲದೆ ಬಹುಮುಖ್ಯ ದಾಖಲೆಗಳನ್ನು ಟೆಕ್ಸ್ಟ್‌ ಆಗಿ ಕಳಿಸಿದ್ದರೆ ಅಂಥ ಮೇಲ್‌ಗಳನ್ನು ಪರ್ಸನಲ್‌ ಬಾಕ್ಸ್‌ ಮಾಡಿ ಉಳಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಮುಖ್ಯವಾದ ಸೆಂಟ್‌ ಮೇಲ್‌ಗಳು ಡಿಲೀಟ್‌ ಆಗುವುದನ್ನು ತಪ್ಪಿಸಬಹುದು. ಸೆಂಟ್‌ ಮೇಲ್‌ನಲ್ಲಿ ವರ್ಷಗಳಷ್ಟು ಹಳೆಯ ಸಾವಿರಗಟ್ಟಲೆ ಮೇಲ್‌ಗಳನ್ನು ಉಳಿಸಿಕೊಂಡರೆ ಮುಂದೆ ಯಾವುದು ಮುಖ್ಯವಾದ ಮೇಲ್‌, ಯಾವುದು ಮುಖ್ಯವಲ್ಲದ ಮೇಲ್‌ ಎಂಬುದನ್ನು ಗುರುತಿಸುವುದೇ ದೊಡ್ಡ ತಲೆನೋವಾಗುತ್ತದೆ.

ಹೀಗಾಗಿ ಇನ್‌ಬಾಕ್ಸ್‌ ನಿರ್ವಹಣೆಗೆ ಗಮನ ನೀಡುವಂತೆ ಸೆಂಟ್‌ ಮೇಲ್‌ಗಳ ನಿರ್ವಹಣೆಗೂ ಆದ್ಯತೆ ನೀಡಿ. ಮೇಲ್‌ಗಳ ಕಸದ ರಾಶಿ ಹೆಚ್ಚಾದ ಬಳಿಕ ಮುಖ್ಯವಾದ ಮೇಲ್‌ ಅನ್ನು ಆಯ್ಕೆ ಮಾಡಿಕೊಳ್ಳಲು ಕಷ್ಟಪಡುವುದಕ್ಕಿಂತ ಇನ್‌ಬಾಕ್ಸ್‌ ನಿರ್ವಹಣೆ ಜತೆಗೆ ಸೆಂಟ್‌ ಐಟಮ್ಸ್‌ ಅನ್ನು ಸೂಕ್ತವಾಗಿ ನಿರ್ವಹಣೆ ಮಾಡಿ. ಕಸವನ್ನು ಅಂದಂದೇ ಖಾಲಿ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.