ADVERTISEMENT

2016ರ ಅತ್ಯುತ್ತಮ ಆ್ಯಪ್‌ಗಳು…

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 19:30 IST
Last Updated 24 ಜನವರಿ 2017, 19:30 IST
2016ರ  ಅತ್ಯುತ್ತಮ ಆ್ಯಪ್‌ಗಳು…
2016ರ ಅತ್ಯುತ್ತಮ ಆ್ಯಪ್‌ಗಳು…   

ಆ್ಯಪಲ್ ಸ್ಟೋರ್, ಗೂಗಲ್ ಆ್ಯಪ್ ಸ್ಟೋರ್‌ನಲ್ಲಿ 40 ಲಕ್ಷಕ್ಕೂ ಹೆಚ್ಚು ಆ್ಯಪ್‌ಗಳು ಲಭ್ಯವಿವೆ. ಅವುಗಳಲ್ಲಿ ಗೇಮ್ ಆ್ಯಪ್‌ಗಳು, ಹವಾಮಾನ ಆ್ಯಪ್‌ಗಳು, ಆ್ಯಪ್‌ ಸಲಕರಣೆಗಳು ಸೇರಿವೆ.  ಆಂಡ್ರಾಯ್ಡ್‌, ಐಒಎಸ್ ಮತ್ತು ವಿಂಡೋಸ್ ಮಾದರಿಯ ಕೆಲವೇ ಕೆಲವು ಆ್ಯಪ್‌ಗಳು ಮಾತ್ರ 2016ನೇ ವರ್ಷದ ಅತ್ಯುತ್ತಮ ಆ್ಯಪ್‌ಗಳು ಎಂಬ ಮನ್ನಣೆ ಪಡೆದಿವೆ. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

*
ನ್ಯೂಜೆಲ್ ಆ್ಯಪ್
ಸುದ್ದಿವಾಹಿನಿಗಳು ಮತ್ತು ನ್ಯೂಸ್‌ ವೆಬ್‌ಸೈಟ್‌ಗಳ ಸುದ್ದಿಯ ಸಾರವನ್ನು ಸಂಕ್ಷಿಪ್ತವಾಗಿ ನೀಡುವ ಸಲುವಾಗಿ ನಜೆಲ್ (Nuzzel) ಆ್ಯಪ್  ವಿನ್ಯಾಸ ಮಾಡಲಾಗಿದೆ. ಇದು 2015ರಲ್ಲಿ ಬಿಡುಗಡೆಯಾಗಿದ್ದರೂ ಜನಪ್ರಿಯಗೊಂಡಿದ್ದು 2016ರಲ್ಲಿ. ಓದುಗರಿಗೆ ಸಾಕಷ್ಟು ಅನುಕೂಲತೆಗಳನ್ನು ಈ ಆ್ಯಪ್‌ನಲ್ಲಿ ಕಲ್ಪಿಸಲಾಗಿದೆ. ಓದುಗರು ತಮ್ಮ ಇಷ್ಟದ ಸುದ್ದಿಯನ್ನು ಆಯ್ದುಕೊಂಡು ಓದಬಹುದು. ಆ ಸುದ್ದಿ ಇಷ್ಟವಾದರೆ ಅದನ್ನು ಗೆಳೆಯರಿಗೂ ಶೇರ್ ಮಾಡಬಹುದು ಹಾಗೇ ಸಾಮಾಜಿಕ ಜಾಲತಾಣಗಳಿಗೂ ಕಳುಹಿಸುವ ಸೌಲಭ್ಯವನ್ನು ಈ ಆ್ಯಪ್ ಕಲ್ಪಿಸಿದೆ. ಒಟ್ಟಾರೆ 2016ರ ಅತ್ಯುತ್ತಮ ಆ್ಯಪ್‌ಗಳಲ್ಲಿ  ನ್ಯೂಜೆಲ್ ಕೂಡ ಒಂದು. ಇದು ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿದೆ.
ಪ್ಲೇ ಸ್ಟೋರ್: Nuzzel

*
ಎನ್‌ಪಿಆರ್‌ ಆ್ಯಪ್
ಎನ್‌ಪಿಆರ್‌ ಒಂದು ಜನಪ್ರಿಯ ರೇಡಿಯೊ ಆ್ಯಪ್. ಕಳೆದ ಎರಡು– ಮೂರು ವರ್ಷಗಳ ಹಿಂದೆ ಈ ಆ್ಯಪ್ ಬಿಡುಗಡೆಯಾಗಿದ್ದರೂ ಮಾರುಕಟ್ಟೆಯ ಲ್ಲಿ ಗಳಿಕೆಯ ಪ್ರಮಾಣ ತೀರ ಕಡಿಮೆಯಾಗಿತ್ತು. ಇದರಲ್ಲಿ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಲಾಗಿತ್ತು. ಸಂಗೀತದ ಸಾವಿರಾರು ಆ್ಯಪ್‌ಗಳ ಪೈಪೋಟಿ ಎದುರಿಸಲಾರದೇ ಎನ್‌ಪಿಆರ್‌ ನಷ್ಟದ ಹಾದಿಯಲ್ಲಿತ್ತು.

ADVERTISEMENT

2016ರಲ್ಲಿ ಈ ಆ್ಯಪ್ ಅನ್ನು ಹಲವು ವಿಶೇಷತೆಗಳೊಂದಿಗೆ ಮರು ವಿನ್ಯಾಸ ಮಾಡಿ ‘ಎನ್‌ಪಿಆರ್‌  ಒನ್’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು.  ಸಂಗೀತಕ್ಕೆ ನೀಡಿದ್ದ ಮನ್ನಣೆಯನ್ನು ಸಡಿಲಿಸಿ ಸ್ಥಳೀಯ ಸುದ್ದಿ ಗಳು ಮತ್ತು ಹವಾಮಾನ ವರದಿಗೆ ಅದ್ಯತೆ ನೀಡಿದ್ದರಿಂದ ಈ ಆ್ಯಪ್ ಜನಪ್ರಿಯತೆಯ ಹಾದಿಗೆ ಮರಳಿತು. ಜಾಗತಿಕ ಭೂಪಟದಲ್ಲಿ ಲಭ್ಯವಿರುವ ನೂರಾರು ಪ್ರಾದೇಶಿಕ ಭಾಷೆಗಳ ರೇಡಿಯೊಗಳನ್ನು  ಈ ಆ್ಯಪ್ ಮೂಲಕ ಆಲಿಸಬಹುದು. ಇದು ಕೂಡ ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿದೆ.
ಪ್ಲೇ ಸ್ಟೋರ್: NPR One

*
ಅನ್‌ಟ್ಯಾಪ್ಡ್‌ ಆ್ಯಪ್‌
ಬಿಯರ್ ಪ್ರಿಯರಿಗಾಗಿಯೇ ವಿನ್ಯಾಸ ಮಾಡಿರುವ ಅನ್‌ಟ್ಯಾಪ್ಡ್‌ ಆ್ಯಪ್‌ ಅನ್ನು  2016ರಲ್ಲಿ  ಮರು ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗಿದೆ. ಬಾರ್ ಕೋಡ್ ವಿಶೇಷತೆಯೊಂದಿಗೆ ಈ ಆ್ಯಪ್ ಜನಪ್ರಿಯವಾಗಿದೆ. ಬಿಯರ್ ಪ್ರಿಯರು ಬಾಟಲ್ ಮೇಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಅದರ ವಿಶೇಷತೆಗಳನ್ನು ಸುಲಭವಾಗಿ ಗ್ರಹಿಸಬಹುದು. ಬಿಯರ್‌ನಲ್ಲಿರುವ  ಪದಾರ್ಥಗಳು, ಗುಣಮಟ್ಟ, ರುಚಿ, ಇದು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಈ ಆ್ಯಪ್‌ ಮೂಲಕ ತಿಳಿಯಬಹುದಾಗಿದೆ. ಅಲ್ಲದೇ ಗೆಳೆಯರ ಗುಂಪುಗಳನ್ನು ರಚಿಸಿ ಬಿಯರ್ ರುಚಿಯ ಬಗ್ಗೆ ಚರ್ಚಿಸುವ ವೇದಿಕೆಯನ್ನೂ ಈ ಆ್ಯಪ್ ಕಲ್ಪಿಸಿಕೊಟ್ಟಿದೆ.
ಪ್ಲೇ ಸ್ಟೋರ್: Untappd

*
ಚಿಕ್ಕಿ ಫಿಂಗರ್ಸ್…
ಸ್ವತಂತ್ರವಾಗಿ ಪಿಯಾನೊ ಕಲಿಯುವವರಿಗಾಗಿಯೇ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸೆನ್ಸ್ ಆಫ್ ಹ್ಯೂಮರ್ ಹೊಂದಿರುವುದು ಇದರ ಮತ್ತೊಂದು ಗುಣಲಕ್ಷಣ. ಪಿಯಾನೊ ಕಲಿಕೆಗೆ ಸಂಬಂಧಪಟ್ಟ ಮಾಹಿತಿಗಳು, ನುಡಿಸುವ ವಿಧಾನ, ಸಂಗೀತ ಮಾತ್ರೆಗಳು, ಗ್ರಾಫ್‌ಗಳ ಭಂಡಾರವೇ ಇದರಲ್ಲಿದೆ. ಪ್ರಾಥಮಿಕ ಕಲಿಕೆಗೆ ಈ ಆ್ಯಪ್ ಹೆಚ್ಚು ಸಹಕಾರಿಯಾಗಲಿದೆ. ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು140 ರೂಪಾಯಿ ಕೊಟ್ಟು ಖರೀದಿಸಬಹುದು.
ಪ್ಲೇ ಸ್ಟೋರ್: Cheeky Fingers

*
ಪಿಕ್ಸ್
ಸ್ಮಾರ್ಟ್‌ಫೋನ್‌ ಬಳಕೆದಾರರ ಕ್ಯಾಮೆರದ ವಿಡಿಯೊ ಗುಣಮಟ್ಟಕ್ಕಾಗಿ ಮೈಕ್ರೊಸಾಫ್ಟ್ ಕಂಪೆನಿಯು ಪಿಕ್ಸ್ ಆ್ಯಪ್‌ ವಿನ್ಯಾಸ ಮಾಡಿದೆ. ಯಾವುದೇ ಸ್ಮಾರ್ಟ್ ಫೋನ್ ಅಥವಾ ಮೊಬೈಲ್‌ ಬಳಕೆದಾರರು ಇದನ್ನು ಸುಲಭವಾಗಿ ಬಳಸಬಹುದು. ಈ ಆ್ಯಪ್ ಸಹಾಯದಿಂದ 50 ಮೀಟರ್ ದೂರದ ದೃಶ್ಯವನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯಬಹುದು. ಜೂಮ್ ಇನ್, ಜೂಮ್ ಔಟ್, ಫ್ಲಾಷ್‌ ಲೈಟ್, ಕ್ಲೌಡ್ ಲೈಟ್ ಸೇರಿದಂತೆ ಇತ್ಯಾದಿ ಸೌಕರ್ಯಗಳು ಇದರಲ್ಲಿ ಸೇರಿಸಲಾಗಿದೆ. ಮೊಬೈಲ್‌ ಫೋನ್‌ಗಳಲ್ಲಿ  ಫೋಟೊಗ್ರಫಿ ಮಾಡುವವರು ಈ ಪಿಕ್ಸ್ ಆ್ಯಪ್  ಬಳಸಬಹುದು.  ವಿಂಡೋಸ್, ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಗಳಲ್ಲಿ ಈ ಆ್ಯಪ್ ದೊರೆಯುತ್ತದೆ.
ಪ್ಲೇ ಸ್ಟೋರ್: Pix

*
ಪಿನ್‌ ಔಟ್‌
ಪಿನ್‌ ಔಟ್‌ ಕೂಡ  ಪಿನ್‌ಬಾಲ್‌ ಮಾದರಿಯ ಹೊಸ ಗೇಮ್. ಇದನ್ನು ಪಿನ್‌ಬಾಲ್ ಕಂಪೆನಿಯೇ ವಿನ್ಯಾಸ ಮಾಡಿದೆ. ಇದರಲ್ಲಿ ನಿಯೊನ್, ಲೈಟ್ಸ್ ಮತ್ತು ಕ್ಲಾಸಿಕ್ ಗೇಮ್ ಎಂಬ ಮೂರು ಆಟಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.
ಪ್ಲೇ ಸ್ಟೋರ್: Pinout

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.