ADVERTISEMENT

ಸೊಸೆಗೂ ಹೆತ್ತವರುಂಟು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2016, 19:30 IST
Last Updated 4 ನವೆಂಬರ್ 2016, 19:30 IST

ಮಾತೃದೇವೋಭವ, ಪಿತೃದೇವೋ ಭವ – ಎಂದರೆ ತಂದೆ-ತಾಯಿ ದೇವರ ಸಮಾನವೆಂದಾಗಲಿಲ್ಲವೆ? ಜನ್ಮಕೊಟ್ಟ ತಂದೆತಾಯಿಯರನ್ನು ಇಳಿವಯಸ್ಸಿನಲ್ಲಿ ಸಾಕಿ ಸಲಹುವುದು ಮಕ್ಕಳ ಕರ್ತವ್ಯ ಎಂದಾಯ್ತು. ಬಹಳ ಕುಟುಂಬಗಳಲ್ಲಿ ಒಬ್ಬರೋ ಇಬ್ಬರೋ ಮಕ್ಕಳಿರುವರು. ಹೆಣ್ಣಾದರೆ ಅವಳು ಗಂಡನ ಮನೆಗೆ ಸೇರುತ್ತಾಳೆ. ಗಂಡು ಯಾವುದೋ ನೌಕರಿಗಾಗಿ ದೊಡ್ಡ ಪಟ್ಟಣದಲ್ಲಿ ನೆಲಸುತ್ತಾನೆ.

ಊರಿನಲ್ಲಿ ನೆಲಸಿರುವ ತಂದೆತಾಯಿಯರ ರಕ್ಷಣೆ–ಪೋಷಣೆಗಳಿಗೆ ತೊಂದರೆಯಾಗುವುದು. ಕೆಲವರು ಗಂಡುಮಕ್ಕಳು ಅವರನ್ನು ತಮ್ಮೊಂದಿಗೆ ಕರೆದೊಯ್ಯುವರು. ಸೊಸೆ ಬಂದ ಮೇಲೆ ಸಂಸಾರಿಕ ತಾಪತ್ರಯ ಶುರುವಾದರೆ, ಮಗನನ್ನು ಅವರಿಂದ ದೂರ ಮಾಡಿದರೆ ಅವರನ್ನು ನೋಡಿಕೊಳ್ಳುವವರು ಯಾರು? ಕೆಲವರು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ;  ಇನ್ನು ಕೆಲವರು ಅವರನ್ನು ಊರಿಗೆ ಹಿಂದಿರುಗಿಸುತ್ತಾರೆ.

ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳು ತಮ್ಮನ್ನು ನೋಡಿಕೊಳ್ಳಬೇಕು ಮತ್ತು ತಮ್ಮ ಸಮೀಪವೇ ಇರಬೇಕೆಂದು ತಂದೆ–ತಾಯಂದಿರು ಬಯಸುವುದು ಸಹಜ.  ಆದರೆ ಮಗ–ಸೊಸೆ ಅವರನ್ನು ದೂರ ಮಾಡಿದಾಗ ಅವರು ಅಸಾಹಯಕತೆಯಿಂದ ಬೆಂದು–ನೊಂದು ಚಿಂತಾಕ್ರಾಂತರಾಗುವುದೂ ಸಹಜ.

ನಾವು ಹೆತ್ತವರನ್ನು ಬಿಡಲು ಶಕ್ಯವಿಲ್ಲ. ಹಾಗೇನಾದರೂ ಮಾಡಿದರೆ ನಾವೂ ನಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆದಂತೆಯೇ. ಮನೆಗೆ ಸೊಸೆಯಾಗಿ ಬರುವವಳು ಕೂಡ ‘ತನಗೂ ಓರ್ವ ತಂದೆತಾಯಿ ಇದ್ದಾರೆ’ ಎಂಬುದನ್ನು ಮರೆಯಬಾರದು. ಅವಳು ಮಾವ–ಅತ್ತೆಯರನ್ನು ತನ್ನ ತಂದೆತಾಯಿಯರ ಸ್ಥಾನದಲ್ಲಿರಿಸಿ ನೋಡಬೇಕು. ಆಗ ಇಂತಹ ಸಮಸ್ಯೆಗಳು ಏಳಲಾರವು. ನ್ಯಾಯಾಲಯದ ಮೊರೆ ಹೋಗುವ ಪ್ರಸಂಗವೇ ಬರಲಾರದು.
-ಎಸ್.ಡಿ. ನಾಯ್ಕ
ಹಬ್ಬುವಾಡಾ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT