ADVERTISEMENT

ಹೊಸ ಪಲ್ಸರ್‌ ಎನ್‌ಎಸ್‌ 125 ಬಿಡುಗಡೆ

ಪಿಟಿಐ
Published 20 ಏಪ್ರಿಲ್ 2021, 17:14 IST
Last Updated 20 ಏಪ್ರಿಲ್ 2021, 17:14 IST

ನವದೆಹಲಿ: ಬಜಾಜ್‌ ಆಟೊ ಕಂಪನಿಯು ಹೊಸ ಪಲ್ಸರ್‌ ಎನ್‌ಎಸ್‌ 125 ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 93,690.

ಹೊಸ ಪಲ್ಸರ್‌ 125 ಸಿಸಿ ಬಿಎಸ್‌–6 ಡಿಟಿಎಸ್‌–ಐ ಎಂಜಿನ್‌ ಹೊಂದಿದ್ದು, 12 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪಲ್ಸರ್‌ 125ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಬಂದಿದೆ. ಹೀಗಾಗಿ, ಎಂಟ್ರಿ ಸ್ಪೋರ್ಟ್‌ ಬೈಕ್‌ ವಿಭಾಗದಲ್ಲಿ ಹೊಸ ಎನ್‌ಎಸ್ 125 ಬ್ರ್ಯಾಂಡ್‌ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವಿದೆ ಎಂದು ಬಜಾಜ್‌ ಆಟೊ ಕಂಪ‍ನಿಯ ಅಧ್ಯಕ್ಷ ಸಾರಂಗ್‌ ಕಾನಡೆ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.