ADVERTISEMENT

ಕಿಯಾ: 2 ಲಕ್ಷ ಕಾರು ಮಾರಾಟ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 20:10 IST
Last Updated 25 ಜನವರಿ 2021, 20:10 IST
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್   

ಬೆಂಗಳೂರು: ದೇಶದಲ್ಲಿ ಎರಡು ಲಕ್ಷ ಕಾರುಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿರುವ ವಾಹನ ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆ ತನ್ನದು ಎಂದು ಕಿಯಾ ಮೋಟರ್ಸ್ ಹೇಳಿಕೊಂಡಿದೆ.

2020ರ ಜುಲೈನಿಂದ ಈಚೆಗೆ ಒಟ್ಟು ಒಂದು ಲಕ್ಷ ಕಾರುಗಳನ್ನು ಕೇವಲ ಆರು ತಿಂಗಳುಗಳ ಅವಧಿಯಲ್ಲಿ ಡೀಲರ್‌ಗಳಿಗೆ ಕಳುಹಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಿಯಾ ಮೋಟರ್ಸ್ ಕಂಪನಿಯು ಸೆಲ್ಟೋಸ್, ಸಾನೆಟ್ ಮತ್ತು ಕಾರ್ನಿವಾಲ್ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಒಟ್ಟು 17 ತಿಂಗಳುಗಳ ಅವಧಿಯಲ್ಲಿ ಎರಡು ಲಕ್ಷ ಕಾರುಗಳನ್ನು ಡೀಲರ್‌ಗಳಿಗೆ ರವಾನೆ ಮಾಡಲಾಗಿದೆ ಎಂದು ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.