ADVERTISEMENT

ಮಾರ್ಚ್‌ನಲ್ಲಿ ಕಾರು ಮಾರಾಟ ಜೋರು

ಪಿಟಿಐ
Published 1 ಏಪ್ರಿಲ್ 2021, 16:39 IST
Last Updated 1 ಏಪ್ರಿಲ್ 2021, 16:39 IST
   

ನವದೆಹಲಿ: ದೇಶದ ಪ್ರಮುಖ ಆಟೊಮೊಬೈಲ್‌ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ ಮತ್ತು ಟಾಟಾ ಮೋಟರ್ಸ್‌ ಮಾರ್ಚ್‌ ತಿಂಗಳಿನಲ್ಲಿ ಉತ್ತಮ ವಹಿವಾಟು ನಡೆದಿದೆ ಎಂದು ಹೇಳಿವೆ. ಇದೇ ಮಾತನ್ನು ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ), ಹೋಂಡಾ ಕಾರ್ಸ್ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಕೂಡ ಹೇಳಿವೆ.

ಮಾರ್ಚ್‌ನಲ್ಲಿ ದೇಶಿ ಮಾರುಕಟ್ಟೆಯಲ್ಲಿ ಒಟ್ಟು 1.49 ಲಕ್ಷ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಮಾರುತಿ ಸುಜುಕಿ ಹೇಳಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ ಕಂಪನಿಯು 76 ಸಾವಿರ ವಾಹನಗಳನ್ನು ಮಾರಾಟ ಮಾಡಿತ್ತು.

2020ರ ಮಾರ್ಚ್‌ನಲ್ಲಿ 26 ಸಾವಿರ ವಾಹನಗಳನ್ನು ಮಾರಾಟ ಮಾಡಿದ್ದ ಹುಂಡೈ, ಈ ವರ್ಷದ ಮಾರ್ಚ್‌ನಲ್ಲಿ 52 ಸಾವಿರ ಕಾರು ಮಾರಾಟ ಮಾಡಿದೆ. ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ಮಾರಾಟವು ಮಾರ್ಚ್‌ನಲ್ಲಿ 29 ಸಾವಿರಕ್ಕೆ ತಲುಪಿದೆ. ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ ಕಂಪನಿಯು ಒಟ್ಟು ಐದು ಸಾವಿರ ಪ್ರಯಾಣಿಕ ವಾಹನಗಳನ್ನು ಮಾತ್ರ ಮಾರಾಟ ಮಾಡಿತ್ತು.

ADVERTISEMENT

ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ಮಾರಾಟವು 2020–21ರಲ್ಲಿ ಶೇಕಡ 69ರಷ್ಟು ಹೆಚ್ಚಳ ಆಗಿದೆ.

ಟಿಕೆಎಂ ಕಂಪನಿಯು ಮಾರ್ಚ್‌ನಲ್ಲಿ 15 ಸಾವಿರ ವಾಹನಗಳನ್ನು ಮಾರಾಟ ಮಾಡಿದೆ. ಇದು 2013ರ ನಂತರ ಕಂಪನಿಯು ಮಾರ್ಚ್‌ ತಿಂಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ ಮಾಡಿರುವ ಅತಿಹೆಚ್ಚಿನ ಸಂಖ್ಯೆಯ ವಾಹನ ಮಾರಾಟ. ಹಿಂದಿನ ವರ್ಷದ ಮಾರ್ಚ್‌ನಲ್ಲಿ ಕಂಪನಿಯು ಏಳು ಸಾವಿರ ವಾಹನಗಳನ್ನು ಮಾರಾಟ ಮಾಡಿತ್ತು.

16,700:ಮಾರ್ಚ್‌ನಲ್ಲಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ವಾಹನಗಳ ಮಾರಾಟ

7,103:ಹೋಂಡಾ ಕಾರುಗಳ ಮಾರ್ಚ್‌ ತಿಂಗಳ ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.