ADVERTISEMENT

ರಫ್ತು: 20 ಲಕ್ಷದ ಮೈಲಿಗಲ್ಲು ದಾಟಿದ ಮಾರುತಿ ಸುಜುಕಿ

ಪಿಟಿಐ
Published 27 ಫೆಬ್ರುವರಿ 2021, 10:54 IST
Last Updated 27 ಫೆಬ್ರುವರಿ 2021, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಒಟ್ಟಾರೆ 20 ಲಕ್ಷಕ್ಕೂ ಅಧಿಕ ವಾಹನಗಳನ್ನು ರಫ್ತು ಮಾಡಿದ ಮೈಲಿಗಲ್ಲು ಸಾಧಿಸಿದೆ.

ಎಸ್‌–ಪ್ರೆಸೊ, ಸ್ವಿಫ್ಟ್‌ ಮತ್ತು ವಿಟಾರಾ ಬ್ರೆಜಾ ವಾಹನಗಳನ್ನು ಗುಜರಾತ್‌ನ ಮುಂದ್ರಾ ಬಂದರಿನಿಂದ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡುವ ಮೂಲಕ ಈ ಸಾಧನೆ ಮಾಡಿದೆ.

ಕಂಪನಿಯು ಸದ್ಯ 150 ಆವೃತ್ತಿಗಳನ್ನು ಒಳಗೊಂಡ 14 ಮಾದರಿಗಳನ್ನು 100ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿದೆ.

ADVERTISEMENT

‘ಜಾಗತಿಕ ವಾಹನ ವ್ಯವಹಾರದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವುದಕ್ಕೂ ಮೊದಲೇ 34 ವರ್ಷಗಳಿಂದಕಂಪನಿಯು ವಾಹನಗಳನ್ನು ರಫ್ತು ಮಾಡುತ್ತಿದೆ. ಇದರಿಂದಾಗಿಯೇ ಜಾಗತಿಕ ಮಾನದಂಡವನ್ನು ತಲುಪಲು ಸಾಧ್ಯವಾಗಿದೆ’ ಎಂದು ಕಂಪನಿಯು ಸಿಇಒ ಕೆನೆಚಿ ಅಯುಕವಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಭಾರತದ ಘಟಕಗಳಲ್ಲಿ ತಯಾರಾಗಿರುವ ವಾಹನಗಳು ಗುಣಮಟ್ಟ, ಸುರಕ್ಷತೆ, ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ಮಾನದಂಡಗಳನ್ನು ಒಳಗೊಂಡಿವೆ’ ಎಂದು ಅವರು ತಿಳಿಸಿದ್ದಾರೆ.

ಚಿಲಿ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಆಲ್ಟೊ, ಬಲೆನೊ, ಡಿಸೈರ್‌ ಮತ್ತು ಸಿಫ್ಟ್‌ ಮಾದರಿಗಳು ಜನಪ್ರಿಯ ಆಯ್ಕೆಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.