ADVERTISEMENT

ಗುರುವಾರದಿಂದ ಜಿಯೊ ಫೈಬರ್ ಪೋಸ್ಟ್‌ಪೇಯ್ಡ್‌: ಇನ್‌ಸ್ಟಾಲೇಷನ್‌ ಉಚಿತ

ಪಿಟಿಐ
Published 15 ಜೂನ್ 2021, 23:12 IST
Last Updated 15 ಜೂನ್ 2021, 23:12 IST
ಜಿಯೊ
ಜಿಯೊ   

ನವದೆಹಲಿ: ರಿಲಯನ್ಸ್‌ ಜಿಯೊ ಕಂಪನಿಯು ಗುರುವಾರದಿಂದ ಜಿಯೊ ಫೈಬರ್‌ ಪೋಸ್ಟ್‌ಪೇಯ್ಡ್‌ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಲಿದ್ದು, ಹೊಸ ಸಂಪರ್ಕಗಳಿಗೆ ಇನ್‌ಸ್ಟಾಲೇಷನ್‌ ಶುಲ್ಕ ಇರುವುದಿಲ್ಲ ಎಂದು ಕಂಪನಿಯ ಮೂಲಗಳು ತಿಳಿಸಿದೆ.

ಹೊಸ ಪೋಸ್ಟ್‌ಪೇಯ್ಡ್‌ ಸಂಪರ್ಕಕ್ಕೆ ಬಯಸುವವರು, ಆರು ತಿಂಗಳ ಅಥವಾ 12 ತಿಂಗಳ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ತಿಂಗಳ ಯೋಜನೆಯ ದರವು ₹ 399ರಿಂದ ಆರಂಭವಾಗುತ್ತದೆ.

ಸದ್ಯ ಹೊಸ ಸಂಪರ್ಕಕ್ಕೆಕಂಪನಿ ₹ 1,500 ಇನ್‌ಸ್ಟಾಲೇಷನ್‌ ಶುಲ್ಕ ತೆಗೆದುಕೊಳ್ಳುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.