ADVERTISEMENT

ಆರೋಗ್ಯ, ವಾಹನ ವಿಮಾ ಕಂತು ಪಾವತಿಗೆ ವಿನಾಯ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2020, 5:13 IST
Last Updated 16 ಏಪ್ರಿಲ್ 2020, 5:13 IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್   

ಕೋವಿಡ್-19 ತಡೆಯಲೆಂದು ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದ ಆರೋಗ್ಯ ಮತ್ತು ಮೋಟಾರ್‌ (ಥರ್ಡ್‌ ಪಾರ್ಟಿ) ವಿಮಾ ಪಾಲಿಸಿ ಕಂತು ಪಾವತಿಗೆ ಮೇ 15ರವರೆಗೆ ವಿನಾಯ್ತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಮಾರ್ಚ್ 25ರಿಂದ ಮೇ 3ರ ನಡುವೆಕಂತು ಪಾವತಿಸಬೇಕಿದ್ದ ಪಾಲಿಸಿಗೆ ಈ ವಿನಾಯ್ತಿ ಅನ್ವಯವಾಗುತ್ತದೆ. ಕಂತು ವಿನಾಯ್ತಿ ಅವಧಿಯಲ್ಲಿಯೂ ವಿಮಾ ಕಂಪನಿಗಳು ಕ್ಲೇಮ್‌ಗಳ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ.ಈ ಸಂಬಂಧ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳ ಕಂತು ಪಾವತಿಗೆ ಈ ಹಿಂದೆಯೇ ಕೇಂದ್ರ ಹಣಕಾಸು ಸಚಿವಾಲಯ ಮೂರು ತಿಂಗಳ ವಿನಾಯ್ತಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.