ADVERTISEMENT

ಗೃಹ ಸಾಧನ ಕ್ಷೇತ್ರಕ್ಕೆ ಥಾಮ್ಸನ್ ಪ್ರವೇಶ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 4:21 IST
Last Updated 29 ಜೂನ್ 2020, 4:21 IST
ಥಾಮ್ಸನ್ ಕಂಪನಿ ಉತ್ಪನ್ನಗಳು
ಥಾಮ್ಸನ್ ಕಂಪನಿ ಉತ್ಪನ್ನಗಳು   

ಫ್ರೆಂಚ್ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಥಾಮ್ಸನ್ ಭಾರತದಲ್ಲಿ ಸೂಪರ್ ಪ್ಲಾಸ್ಟ್ರೋನಿಕ್ಸ್‌ ಲಿಮಿಟೆಡ್‌ಗೆ ತನ್ನ ಗೃಹ ಎಲೆಕ್ಟ್ರಾನಿಕ್‌ ವಲಯದ ವಿಸ್ತರಣೆಗೆ ಅನುಮತಿ ನೀಡಿದ್ದು, ವಾಷಿಂಗ್ ಮೆಷಿನ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಬಿಡುಗಡೆ ಮಾಡಿದೆ.

ಈಗಾಗಲೇ ಟಿವಿಗಳನ್ನು ದೇಶಿಯವಾಗಿ ತಯಾರಿಸುತ್ತಿರುವ ಥಾಮ್ಸನ್‌, ವಾಷಿಂಗ್ ಮೆಷಿನ್‌ಗಳನ್ನೂ ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿಸುತ್ತಿದೆ. ಸೆಮಿ-ಆಟೊಮ್ಯಾಟಿಕ್ ಶ್ರೇಣಿಯ ವಾಷಿಂಗ್‌ ಮೆಷಿನ್‌ ಆರಂಭಿಕ ಬೆಲೆ ₹ 6,999 ನಿಗದಿಪಡಿಸಿದೆ.

ಥಾಮ್ಸನ್ ಮುಂಬರುವ ದಿನಗಳಲ್ಲಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ಸೆಮಿ-ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್‌ಗಳು 3 ಭಿನ್ನ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 6.5 ಕೆ.ಜಿ, 7.5 ಕೆ.ಜಿ. ಮತ್ತು 8.5 ಕೆ.ಜಿ.ಗಳ ಪೈಕಿ ಉಪಯೋಗಕ್ಕೆ ಅನುಗುಣವಾಗಿ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.

ADVERTISEMENT

ಕಂಪನಿಯು ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹1,000 ಕೋಟಿ ಹೂಡಿಕೆ ಮಾಡಲಿದೆ. ಉತ್ಪಾದನಾ ಪಾಲುದಾರ ಮತ್ತು ಭಾರತದ ಥಾಮ್ಸನ್ ಬ್ರಾಂಡ್ ಲೈಸನ್ಸ್ ಪಡೆದ ಎಸ್‌ಪಿಪಿಎಲ್ ಕೂಡ ಉತ್ತರ ಪ್ರದೇಶದ ಹೊಸ ಘಟಕದಲ್ಲಿ ಹೂಡಿಕೆ ಮಾಡಿದ್ದು ಸದ್ಯದಲ್ಲೇ ಕಾರ್ಯಾಚರಣೆ ಪ್ರಾರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.