ADVERTISEMENT

ಹೊಸ ಎತ್ತರಕ್ಕೆ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 12 ಆಗಸ್ಟ್ 2021, 17:41 IST
Last Updated 12 ಆಗಸ್ಟ್ 2021, 17:41 IST

ಮುಂಬೈ: ವಿದ್ಯುತ್‌, ಐ.ಟಿ. ಮತ್ತು ಬ್ಯಾಂಕಿಂಗ್ ವಲಯದ ಷೇರುಗಳ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳು ಗುರುವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ಏರಿಕೆ ಕಂಡು ವಹಿವಾಟು ಅಂತ್ಯಗೊಳಿಸಿದವು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 19 ಪೈಸೆ ವೃದ್ಧಿಯಾಗಿದ್ದು ಸಹ ಷೇರುಪೇಟೆ ವಹಿವಾಟಿಗೆ ಉತ್ತೇಜನ ನೀಡಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ದಿನದ ವಹಿವಾಟಿನಲ್ಲಿ 318 ಅಂಶ ಏರಿಕೆ ಕಂಡು ಹೊಸ ಎತ್ತರವಾದ 54,843 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 82 ಅಂಶ ಹೆಚ್ಚಾಗಿ 16,364 ಅಂಶಗಳಿಗೆ ತಲುಪಿತು.

ಸೆನ್ಸೆಕ್ಸ್‌ನಲ್ಲಿ ಪವರ್‌ಗ್ರಿಡ್‌ ಷೇರು ಶೇ 6.22ರಷ್ಟು ಗರಿಷ್ಠ ಗಳಿಕೆ ಕಂಡಿತು. ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ಟೈಟಾನ್‌, ಎಲ್ಆ್ಯಂಡ್‌ಟಿ, ಎನ್‌ಟಿಪಿಸಿ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಸಹ ಗಳಿಕೆ ಕಂಡಿವೆ.

ಕಳೆದ ಕೆಲವು ದಿನಗಳಿಂದ ಮಾರಾಟದ ಒತ್ತಡಕ್ಕೆ ಒಳಗಾಗಿದ್ದ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಷೇರುಗಳು ಗುರುವಾರ ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಶೇ 1.97ರವರೆಗೂ ಏರಿಕೆ ಕಂಡಿವೆ.

ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.17ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 71.56 ಡಾಲರ್‌ಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.