ADVERTISEMENT

ದೇವರ ಸ್ಮರಿಸದಿದ್ದರೆ ಜೀವನದಲ್ಲಿ ಕತ್ತಲೆ: ಡಾ.ಅಲ್ಲಮಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 15:05 IST
Last Updated 8 ಸೆಪ್ಟೆಂಬರ್ 2021, 15:05 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––––

ಎನಗೆ ನಿಮ್ಮ ನೆನಹಾದಾಗಲೆ ಉದಯ

ADVERTISEMENT

ಎನಗೆ ನಿಮ್ಮ ಮರಹಾದಾಗಲೆ ಅಸ್ತಮಾನ

ಎನಗೆ ನಿಮ್ಮ ನೆನಹವೆ ಜೀವನ

ಎನಗೆ ನಿಮ್ಮ ನೆನಹವೆ ಪ್ರಾಣ ಕಾಣಾ ತಂದೆ

ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ

ಚರಣದುಂಡಿಗೆಯನೊತ್ತಯ್ಯಾ

ವದನದಲ್ಲಿ ಷಡಕ್ಷರಿಯ ಬರೆಯಯ್ಯಾ

ಕೂಡಲಸಂಗಮದೇವ

ನಾವು ಸದಾ ಕಾಲ ಭಗವಂತನ ಸ್ಮರಣೆಯನ್ನು ಮಾಡಬೇಕು ಎನ್ನುವುದನ್ನು ಬಸವಣ್ಣನವರು ಸೊಗಸಾಗಿ ಇಲ್ಲಿ ವಿವರಿಸಿದ್ದಾರೆ. ಸೂರ್ಯೋದಯವಾದ ತಕ್ಷಣ
ಭಗವಂತನ ಸ್ಮರಣೆ ಮಾಡುವುದು ರೂಢಿಯಲ್ಲಿರುವ ವಿಚಾರ. ಆದರೆ, ನಾವು ಭಗವಂತನ ಸ್ಮರಣೆ ಪ್ರಾರಂಭಿಸಿದರೆ ಅದೇ ನಮಗೆ ಉದಯವಾದಂತೆ. ನಾವು ಸ್ಮರಿಸುವುದನ್ನು ಮರೆತರೆ ನಮ್ಮ ಜೀವನದಲ್ಲಿ ಕತ್ತಲೆ ಆವರಿಸಿದಂತೆ (ಅಸ್ತಮಾನವಾದಂತೆ). ಭಗವಂತನ ಸ್ಮರಣೆಯೇ ಜೀವನದ ಉಸಿರಾಗಿರಬೇಕು. ನಮ್ಮಕಣ ಕಣದಲ್ಲಿಯೂ ಭಗವಂತನ ನಾಮಸ್ಮರಣೆಯೇ ತುಂಬಿರಬೇಕು. ನಮ್ಮ ಹೃದಯದಲ್ಲಿ ಶಿವನ ಚರಣಗಳ ಸ್ಮರಣೆಯೆ ತುಂಬಿರಬೇಕು. ಸದಾ ಕಾಲ ಶಿವಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರಬೇಕು. ನಮ್ಮ ತನು, ಮನ, ಭಾವದಲ್ಲಿ ಭಗವತ್‌ಸೇವೆಯ ಚಿಂತನೆಯನ್ನೆ ಮಾಡುತ್ತಿರಬೇಕು. ಇದರಿಂದ ದೇವರ ಕೃಪೆಯಾಗುತ್ತದೆ ಎನ್ನುವುದನ್ನು ಅವರು ಈ ವಚನದ ಮೂಲಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.