ADVERTISEMENT

ಮಲ್ಲಸಂದ್ರ: ಬಿಜೆಪಿಗೆ ನೂರಕ್ಕೂ ಹೆಚ್ಚು ಜನರು ಸೇರ್ಪಡೆ

ಕಮಲ ಪಾಳಯಕ್ಕೆ ಸೇರಿದ ಜೆಡಿಎಸ್ ವಾರ್ಡ್‌ನ ಮಾಜಿ ಅಧ್ಯಕ್ಷ ಆನಂದ್ ಮತ್ತು ಸಂಗಡಿಗರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:55 IST
Last Updated 25 ಮಾರ್ಚ್ 2023, 19:55 IST
ಮಲ್ಲಸಂದ್ರದ ಯದುನಂದನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ವಾರ್ಡ್‌ನ ಮಾಜಿ ಅಧ್ಯಕ್ಷ ಆನಂದ್ ಮತ್ತು ಸಂಗಡಿಗರು ಏರ್ಪಡಿಸಿದ್ದ ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಶಶಿ ಶಿವಕುಮಾರ್, ಟಿಎಸ್ ಗಂಗರಾಜು, ದಾಸರಹಳ್ಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಟಿ ಶಿವಕುಮಾರ್, ಡಿ.ಕೆ ಮಹೇಶ್, ವಿನೋದ್ ಗೌಡ, ಎಂ.ಆರ್ ಶ್ರೀನಿವಾಸ್, ಮಲ್ಲಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಗಂಗರಾಜು, ನಾಗಭೂಷಣ್, ರಘು, ಮಾರುತಿ, ಲಕ್ಕಪ್ಪ, ನಾಗರಾಜ್, ಅಶೋಕ್, ನವೀನ್, ಮಹೇಶ್, ಗಿರೀಶ್ ಇದ್ದರು.

ಪೀಣ್ಯ ದಾಸರಹಳ್ಳಿ: ಮಲ್ಲಸಂದ್ರದ ಯದುನಂದನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ವಾರ್ಡ್‌ನ ಮಾಜಿ ಅಧ್ಯಕ್ಷ ಆನಂದ್ ಮತ್ತು ಸಂಗಡಿಗರು ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಜೆಡಿಎಸ್‌ನ ಆನಂದ್ ಸೆರಿದಂತೆ ನೂರಕ್ಕೂ ಹೆಚ್ಚು ಜನರು ಬಿಜೆಪಿಗೆ ಸೇರ್ಪಡೆಯಾದರು.

‘ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡುತ್ತಿರುವ ಜೆಡಿಎಸ್ ಶಾಸಕನನ್ನು ಜನತೆ ಮನೆ ಕಡೆ ಮಂಜಣ್ಣ ಮಾಡಲಿದ್ದಾರೆ. ಕ್ಷೇತ್ರದ ಬೇಸತ್ತ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ’ ಎಂದು ಮಾಜಿ ಶಾಸಕ ಎಸ್. ಮುನಿರಾಜು ತಿಳಿಸಿದರು.

ADVERTISEMENT

ಕ್ಷೇತ್ರಕ್ಕೆ ಕಾವೇರಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದೂ ಸೇರಿದಂತೆ ಹಲವು ಕೆಲಸಗಳನ್ನು ತಾವು ಮಾಡಿರುವುದಾಗಿ ಹೇಳಿಕೊಂಡರು.

ಬಿಬಿಎಂಪಿ ಮಾಜಿ ಸದಸ್ಯೆ ಶಶಿ ಶಿವಕುಮಾರ್, ಟಿಎಸ್ ಗಂಗರಾಜು, ದಾಸರಹಳ್ಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಟಿ. ಶಿವಕುಮಾರ್, ಡಿ.ಕೆ ಮಹೇಶ್, ವಿನೋದ್ ಗೌಡ, ಎಂ.ಆರ್. ಶ್ರೀನಿವಾಸ್, ಮಲ್ಲಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಗಂಗರಾಜು, ನಾಗಭೂಷಣ್, ರಘು, ಮಾರುತಿ, ಲಕ್ಕಪ್ಪ, ನಾಗರಾಜ್, ಅಶೋಕ್, ನವೀನ್, ಮಹೇಶ್, ಗಿರೀಶ್, ಮಾರಣ್ಣ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.