ADVERTISEMENT

ತಮ್ಮನ ಪೊಲೀಸ್ ಪರೀಕ್ಷೆ ಬರೆದಿದ್ದ ಕಾನ್‌ಸ್ಟೆಬಲ್ ಕೆಲಸದಿಂದ ವಜಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 14:09 IST
Last Updated 18 ಸೆಪ್ಟೆಂಬರ್ 2021, 14:09 IST
   

ಚಿಕ್ಕಬಳ್ಳಾಪುರ: ತನ್ನ ತಮ್ಮನ ಬದಲಿಗೆ ಪೊಲೀಸ್ ಪರೀಕ್ಷೆ ಬರೆಯಲು ಯತ್ನಿಸಿದ ಕಾನ್‌ಸ್ಟೆಬಲ್ ದೇವರಾಜ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಕೆಲಸದಿಂದ ವಜಾಗೊಳಿಸಿದ್ದಾರೆ.

ದೇವರಾಜ್ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆದ ಸಿವಿಲ್ ಪೊಲೀಸ್ ನೇಮಕ ಪರೀಕ್ಷೆಯಲ್ಲಿ ತನ್ನ ತಮ್ಮ ಮರೆಪ್ಪ ಬದಲಿಗೆ ತಾನೇ ಪರೀಕ್ಷೆ ಬರೆಯುತ್ತಿದ್ದರು. ಕೊಠಡಿ ಪರಿವೀಕ್ಷಕರು ಇವರನ್ನು ಗುರುತಿಸಿದ್ದರು.

ಈ ಸಂಬಂಧ ಪಿಎಸ್‌ಐ ಆರ್.ವಿ.ಮಂಜುನಾಥ್ ದೂರು ಆಧರಿಸಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೇವರಾಜ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇಲಾಖೆ ವಿಚಾರಣೆಯಲ್ಲಿ ಆರೋಪ ಸಾಬೀತಾದ ಕಾರಣ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.