ADVERTISEMENT

ಕೋವಿಡ್‌ 2ನೇ ಅಲೆ: ಒಬ್ಬರು ಸಾವು

14 ಮಂದಿಗೆ ದೃಢ; ಸಕ್ರಿಯ ಪ್ರಕರಣ 120

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 15:41 IST
Last Updated 30 ಮಾರ್ಚ್ 2021, 15:41 IST

ಚಿಕ್ಕಮಗಳೂರು: ಕೋವಿಡ್‌ ತಗುಲಿದ್ದ ನಗರದ 69 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬುಧವಾರ14 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಐವರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಎರಡನೇ ಅಲೆಯ ಕಾಣಿಸಿಕೊಂಡ ನಂತರ ಮೊದಲ ಸಾವು ಇದಾಗಿದೆ.

ಕೋವಿಡ್‌ ದೃಢ ಪ್ರಕರಣಗಳ ತಾಲ್ಲೂಕುವಾರು ಅಂಕಿಅಂಶ: ಚಿಕ್ಕಮಗಳೂರು, ಕೊಪ್ಪ, ತರೀಕೆರೆ ತಲಾ 4 ಹಾಗೂ ಕಡೂರು– ಇಬ್ಬರಿಗೆ ಪತ್ತೆಯಾಗಿದೆ.

ADVERTISEMENT

ಕೋವಿಡ್‌ ಪರೀಕ್ಷೆಗೆ ಬುಧವಾರ1639 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 120 ಇವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.