ADVERTISEMENT

ಸೀಲ್‌ಡೌನ್‌: ಜನರಿಗೆ ಅಗತ್ಯ ಸಾಮಗ್ರಿ ವಿತರಿಸಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 4:47 IST
Last Updated 2 ಜುಲೈ 2021, 4:47 IST

ಸಿದ್ದಾಪುರ: ‘ಇಲ್ಲಿನ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆ ನಿವಾಸಿಗಳಿಗೆ ಅಗತ್ಯ ಸಾಮಗ್ರಿ ತಲುಪಿಸುವಲ್ಲಿ ಗ್ರಾ. ಪಂ ಸಂಪೂರ್ಣ ವಿಫಲವಾಗಿದೆ’ ಎಂದು ಸಿ.ಪಿ.ಐ (ಎಂ) ಮುಖಂಡ ಎನ್.ಡಿ ಕುಟ್ಟಪ್ಪ ಆರೋಪಿಸಿದರು.

‘ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ವಾಸ ಮಾಡುತ್ತಿದ್ದಾರೆ. ಆ ಭಾಗದಲ್ಲಿ ಬಡ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಪ್ರತಿ ದಿನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸೀಲ್‍ಡೌನ್‍ನಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕಿಕೊಂ ಡಿದ್ದರೂ, ಗ್ರಾ.ಪಂ ಪ್ರತಿನಿಧಿಗಳು ಜನರ ಬಗ್ಗೆ ಚಿಂತಿಸದಿರುವುದು ವಿಷಾದನೀಯ’ ಎಂದರು.

‘ಕೋವಿಡ್ ನಿಯಂತ್ರಣ ಸಂಬಂಧ ವಿರಾಜಪೇಟೆ ತಹಶೀಲ್ದಾರರು ಭೇಟಿ ನೀಡಿ ಸತತ ಸಭೆಗಳನ್ನು ನಡೆಸಿದರು. ಆದರೆ ಗ್ರಾ.ಪಂ ನಿರ್ಲಕ್ಷ್ಯದಿಂದ ಸೊಂಕು ವ್ಯಾಪಕವಾಗಿ ಹಬ್ಬಿದೆ’ ಎಂದು ಆರೋಪಿಸಿದರು.

ADVERTISEMENT

‘ಪಂಚಾಯಿತಿ ವತಿಯಿಂದ ಸೀಲ್‌ ಡೌನ್ ವ್ಯಾಪ್ತಿಯ ಜನರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ವಿತರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪಕ್ಷದ ಮುಖಂಡ ವೈಜು, ಎಚ್.ಬಿ.ರಮೇಶ್ ಮಾತನಾಡಿದರು.

ಪಕ್ಷದ ಪ್ರಮುಖರಾದ ಸಿ.ಎ ಮುಸ್ತಾಫ, ಸಾಲಿ ಪೌಲೋಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.