ADVERTISEMENT

ತೆಂಗಿನ ಉಪ ಉತ್ಪನ್ನ ಆದ್ಯತೆಯಾಗಲಿ

ಭಾರತೀಯ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಟಿ.ಕೃಷ್ಣಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:34 IST
Last Updated 19 ಸೆಪ್ಟೆಂಬರ್ 2021, 4:34 IST
ತುರುವೇಕೆರೆಯಲ್ಲಿ ತೆಂಗಿನ ನಾರಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ನಡೆಯಿತು. ಭಾರತೀಯ ನಾರು ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಟಿ.ಕೃಷ್ಣಮೂರ್ತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್, ಬದರಿಕಾಶ್ರಮದ ಪುಣ್ಯಾವ್ರತಾನಂದ ಮಹಾರಾಜ್, ನಾರು ಅಭಿವೃದ್ಧಿ ನಿಗಮದ ವಲಯಾಧಿಕಾರಿ ಪ್ರೇಮಲತಾ, ನಾರು ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಇದ್ದರು
ತುರುವೇಕೆರೆಯಲ್ಲಿ ತೆಂಗಿನ ನಾರಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ನಡೆಯಿತು. ಭಾರತೀಯ ನಾರು ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಟಿ.ಕೃಷ್ಣಮೂರ್ತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್, ಬದರಿಕಾಶ್ರಮದ ಪುಣ್ಯಾವ್ರತಾನಂದ ಮಹಾರಾಜ್, ನಾರು ಅಭಿವೃದ್ಧಿ ನಿಗಮದ ವಲಯಾಧಿಕಾರಿ ಪ್ರೇಮಲತಾ, ನಾರು ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಇದ್ದರು   

ತುರುವೇಕೆರೆ: ತಾಲ್ಲೂಕಿನ ತೆಂಗು ಬೆಳೆಯುವ ರೈತರು ತೆಂಗಿನ ಉಪ ಉತ್ಪನ್ನವಾದ ನಾರನ್ನು ತಾವೇ ತಯಾರು ಮಾಡುವ ಮೂಲಕ ಆರ್ಥಿಕ ಸದೃಢತೆ ಹೊಂದಬೇಕು ಎಂದು ಭಾರತೀಯ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಟಿ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಭಾರತೀಯ ನಾರು ಅಭಿವೃದ್ಧಿ ಮಂಡಳಿ, ಕರ್ನಾಟಕ ತೆಂಗಿನ ನಾರಿನ ಮಹಾಮಂಡಳ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ತೆಂಗಿನ ನಾರಿನ ಉತ್ಪನ್ನಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಯಥೇಚ್ಚವಾಗಿ ತೆಂಗು ಬೆಳೆಯಲಾಗುತ್ತಿದೆ. ಆದರೆ ಅದರ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತಿರುವವರ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ತೆಂಗಿನ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರು ಮಾಡುವ ಕುಶಲತೆಯನ್ನು ತೆಂಗು ಬೆಳೆಗಾರರು ಹೊಂದಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.

ADVERTISEMENT

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ಮಾತನಾಡಿ, ರಾಜ್ಯದ ತೆಂಗಿನ ಉತ್ಪನ್ನಗಳನ್ನು ಖರೀದಿಸಿ ಪಕ್ಕದ ತಮಿಳುನಾಡು ಕೈಗಾರಿಕೆಗಳನ್ನು ನಡೆಸುತ್ತಿದೆ. ಆದರೆ ತಮಿಳುನಾಡಿನಿಂದ ಕರ್ನಾಟಕಕ್ಕೆ ಒಂದೇ ಒಂದು ಕಾಯಿ ಸಿಪ್ಪೆಯನ್ನು ತರಲು ಸಾದ್ಯವಾಗದು. ಅಲ್ಲಿನವರು ತೆಂಗಿನ ಉತ್ಪನ್ನಗಳನ್ನು ತಯಾರು ಮಾಡಿ, ಮಾರುಕಟ್ಟೆ ಮಾಡುವ ಕೌಶಲ್ಯ ಹೊಂದಿದ್ದಾರೆ. ಕರ್ನಾಟಕದ ತೆಂಗಿನ ಉತ್ಪನ್ನಗಳಿಗೆ ದೂರದ ಗುಜರಾತ್ ಸೇರಿದಂತೆ ಅನೇಕ ಕಡೆ ಬೇಡಿಕೆಯಿದೆ. ಸ್ಥಳೀಯವಾಗಿ ತೆಂಗು ಬೆಳೆಗಾರರು ಉತ್ಪನ್ನಗಳ ತಯಾರಿಕೆಗೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬದರಿಕಾಶ್ರಮದ ಪುಣ್ಯಾವ್ರತಾನಂದ ಮಹಾರಾಜ್ ಆಶೀರ್ವಚನ ನೀಡಿದರು.

ನಾರು ಅಭಿವೃದ್ಧಿ ನಿಗಮದ ವಲಯಾಧಿಕಾರಿ ಪ್ರೇಮಲತಾ, ನಾರು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಸ್ಮೃತಿ ಯೋಜನೆಯ ಜಂಟಿ ನಿರ್ದೇಶಕ ಅರುಣ್‌ಕುಮಾರ್, ಗುಜರಾತ್ ಎಲೆಕ್ಟ್ರಿಕ್ ಬೋರ್ಡ್‍ನ ಮೋಹನ್ ರಾಮ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.