ADVERTISEMENT

ನಿತ್ಯೋತ್ಸವ ಕವಿಯ ಉಡುಪಿ ನಂಟು

​ಪ್ರಜಾವಾಣಿ ವಾರ್ತೆ
Published 3 ಮೇ 2020, 15:59 IST
Last Updated 3 ಮೇ 2020, 15:59 IST
2014ರಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಗೋವಿಂದ ಪೈ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ನಿಸಾರ್ ಅಹಮ್ಮದ್.
2014ರಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಗೋವಿಂದ ಪೈ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ನಿಸಾರ್ ಅಹಮ್ಮದ್.   

ಉಡುಪಿ: ನಿತ್ಯೋತ್ಸವ ಕವಿ ಕೆ.ಎಸ್‌.ನಿಸಾರ್ ಅಹಮ್ಮದ್‌ ಅವರಿಗೆ ಉಡುಪಿ ಮೇಲೆ ವಿಶೇಷ ಪ್ರೀತಿ. ಇಲ್ಲಿನ ಸಾಹಿತ್ಯಾಸಕ್ತರ ಜತೆ ನಿಕಟ ಸಂಪರ್ಕ ಹೊಂದಿದ್ದ ಕೆಎಸ್‌ಎನ್‌ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.

ಸೆ.6, 2014ರಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಗೋವಿಂದ ಪೈ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ನಿಸಾರ್ ಅಹಮ್ಮದ್ ಭಾಗವಹಿಸಿದ್ದರು. 2015ರಲ್ಲಿ ಬೈಂದೂರಿನಲ್ಲಿ ನಡೆದ ಗೋಪಾಲಕೃಷ್ಣ ಅಡಿಗರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅವರಿಗೆ ಪಂಪ ಪ್ರಶಸ್ತಿ ಸಿಕ್ಕ ಬಳಿಕ 2017ರ ಡಿಸೆಂಬರ್‌ನಲ್ಲಿ ಉಡುಪಿಗೆ ಕರೆಸಿ ಸನ್ಮಾನ ಮಾಡಲಾಗಿತ್ತು.ರಂಗಸ್ಥಳ ಹಾಗೂ ಅಮೋಘ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದ್ದವು ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದರು ಹಿರಿಯ ಸಾಹಿತಿ ಮರಳೀಧರ ಉಪಾಧ್ಯ.

ADVERTISEMENT

ಉಡುಪಿಯ ಒಳಕಾಡು ಶಾಲೆಯಲ್ಲಿ ಕೈಯಾರರ ಬದುಕು ಬರಹ ಕುರಿತು ವಿಚಾರ ಸಂಕಿರಣದಲ್ಲಿ ನಿಸಾರ್ ಅಹಮ್ಮದ್ ಭಾಗವಹಿಸಿದ್ದರು. ನಂತರ ಅರಣ್ಯ ಇಲಾಖೆಯ ಕಾರ್ಯಕ್ರಮಕ್ಕೂ ಬಂದಿದ್ದರು. ನಿತ್ಯೋತ್ಸವ ಕವಿ ಎಂದರೆ ಕರಾವಳಿಗರಿಗೆ ವಿಶೇಷ ಪ್ರೀತಿ ಇತ್ತು ಎಂದು ಸ್ಮರಿಸಿದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.