ADVERTISEMENT

‘ಕೂ’ ಸಂಸ್ಥೆಗೆ 1 ವರ್ಷದಲ್ಲಿ 500 ಸಿಬ್ಬಂದಿ ನೇಮಕ ಗುರಿ: ಅಪ್ರಮೇಯ ರಾಧಾಕೃಷ್ಣ

ಪಿಟಿಐ
Published 12 ಸೆಪ್ಟೆಂಬರ್ 2021, 7:50 IST
Last Updated 12 ಸೆಪ್ಟೆಂಬರ್ 2021, 7:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ಒಂದು ವರ್ಷದಲ್ಲಿ ಸ್ವದೇಶಿ ಮೈಕ್ರೋ ಬ್ಲಾಗಿಂಗ್ ಜಾಲತಾಣ ‘ಕೂ’ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆಯಿದೆ.

‘ಕೂ’ ಸಂಸ್ಥೆಯು ಎಂಜಿನಿಯರಿಂಗ್‌, ಉತ್ಪನ್ನ ಮತ್ತು ಸಮುದಾಯ ನಿರ್ವಹಣಾ ತಂಡಗಳಿಗಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ಇತ್ತೀಚಿಗೆ 1 ಕೋಟಿ ಬಳಕೆದಾರರ ಗುರಿಯನ್ನು ತಲುಪಿದ ‘ಕೂ’ನಲ್ಲಿ ಪ್ರಸ್ತುತ 200 ಉದ್ಯೋಗಿಗಳಿದ್ದಾರೆ.

ADVERTISEMENT

‘ಪ್ರಸ್ತುತ ನಾವು 200 ಮಂದಿ ಇದ್ದೇವೆ. ಮುಂದಿನ ಒಂದು ವರ್ಷದಲ್ಲಿ ಎಂಜಿನಿಯರಿಂಗ್‌, ಉತ್ಪನ್ನ ಮತ್ತು ಸಮುದಾಯ ನಿರ್ವಹಣೆ ವಿಭಾಗಗಳಿಗೆ ಕನಿಷ್ಠ 500 ಮಂದಿಯನ್ನು ನೇಮಕ ಮಾಡಿಕೊಳ್ಳಲಿದ್ದೇವೆ’ ಎಂದು ‘ಕೂ’ ಸಹ-ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಪಿಟಿಐಗೆ ತಿಳಿಸಿದರು.

ಸರ್ಕಾರಿ ಸಂಬಂಧಗಳು, ಮಾರ್ಕೆಂಟಿಗ್‌, ಬ್ರ್ಯಾಂಡ್‌ ಮಾರ್ಕೆಂಟಿಗ್‌ ವಿಭಾಗದಲ್ಲೂ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.

‘ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿರುವ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ನಾವು ಇಚ್ಛಿಸುತ್ತೇವೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.