ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 19:30 IST
Last Updated 6 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ -19

256. ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು?

ಎ) ಬಾಳಾಸಾಹೇಬ್ ಠಾಕ್ರೆ

ADVERTISEMENT

ಬಿ) ದೇವೇಂದ್ರ ಫಡಣವೀಸ್‌

ಸಿ) ಏಕನಾಥ ಖಡ್ಸೆ

ಡಿ) ಉದ್ಧವ್ ಠಾಕ್ರೆ

257. ಇತ್ತೀಚೆಗೆ ಕರ್ನಾಟಕದ ಕರಾವಳಿಯನ್ನು ಬಾಧಿಸಿದ ಚಂಡಮಾರುತ ಯಾವುದು?

ಎ) ಕತ್ರಿನಾ

ಬಿ) ಆಂಫನ್‌

ಸಿ) ಹುಡ್ಹುಡ್‌

ಡಿ) ತೌತೆ

258. ‘ಸ್ವಚ್ಛ ಭಾರತ ಅಭಿಯಾನ’ ಎಂದು ಆರಂಭವಾಯಿತು?

ಎ) ಅಕ್ಟೋಬರ್ 2, 2014

ಬಿ) ಅಕ್ಟೋಬರ್ 12, 2014

ಸಿ) ಅಕ್ಟೋಬರ್ 22, 2014

ಡಿ) ಅಕ್ಟೋಬರ್ 14, 2014

259. ‘ಬಸವ ಸಾಗರ’ ಜಲಾಶಯವನ್ನು ಯಾವ ನದಿಗೆ ಕಟ್ಟಲಾಗಿದೆ?

ಎ) ಕೃಷ್ಣಾ

ಬಿ) ಕಾವೇರಿ

ಸಿ) ಮಹಾನದಿ

ಡಿ) ಗೋದಾವರಿ

260. ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ?

ಎ) ಅನಿಮೋಮೀಟರ್‌

ಬಿ) ಹೈಗ್ರೋಮೀಟರ್

ಸಿ) ಗ್ಯಾಲ್ವನೋಮೀಟರ್

ಡಿ) ಸ್ಪೆಕ್ಟ್ರೋಮೀಟರ್

261. ಜೀವಕೋಶದಲ್ಲಿ ಪ್ರೊಟೀನ್ ಸಂಯೋಜನೆ ನಡೆಯುವುದು ಎಲ್ಲಿ?

ಎ) ಸ್ರಾವಕ ಕಣಗಳು

ಬಿ) ಮೇದಸ್ಸಿನ ಬಿಂದುಗಳು

ಸಿ) ರಿಬೋಸೋಮ್

ಡಿ) ಮೈಟೋಕಾಂಡ್ರಿಯ

262. ಮಸಿ ಹೀರುವ ಕಾಗದದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು

ಎ) ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ

ಬಿ)ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ

ಸಿ)ಮಸಿ ಹೀರುವ ಕಾಗದದಲ್ಲಿ ಮಸಿಯ ಹರಡುವಿಕೆಯಿಂದ ಆಗುತ್ತದೆ

ಡಿ) ಸ್ಟೆಫನ್ ಪೇಪರ್

263. ಕಾಮನಬಿಲ್ಲು ಉಂಟಾಗಲು ಕಾರಣ

ಎ) ಬೆಳಕಿನ ಪ್ರತಿಬಿಂಬದಿಂದ

ಬಿ) ಬೆಳಕಿನ ವಕ್ರೀಭವನದಿಂದ

ಸಿ) ಬೆಳಕಿನ ಹರಡುವಿಕೆಯಿಂದ

ಡಿ) ಮೇಲಿನ ಎಲ್ಲದರಿಂದ

264. ಸೂರ್ಯನ ಕಿರಣಗಳು ಸೂರ್ಯನಿಂದ ಭೂಮಿಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ?

ಎ) 8.0 ನಿಮಿಷ

ಬಿ) 8.2 ನಿಮಿಷ

ಸಿ) 8.7 ನಿಮಿಷ

ಡಿ) 8.3 ನಿಮಿಷ

265. ‘ಕ್ಯೂಸೆಕ್’ ಎಂದರೆ

ಎ) ಕ್ಯೂಬಿಕ್ ಮೀಟರ್ (1000 ಮೀ.) ಪರ್ ಸೆಕೆಂಡ್

ಬಿ) ಕ್ಯೂಬಿಕ್ ಲೀಟರ್ (1000 ಲೀ.) ಪರ್ ಸೆಕೆಂಡ್

ಸಿ) ಕ್ಯೂಬಿಕ್ ಗ್ರಾಂ (1000 ಗ್ರಾಂ) ಪರ್ ಸೆಕೆಂಡ್

ಡಿ) ಮೇಲಿನ ಯಾವುದೂ ಅಲ್ಲ

266. ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸಲು ಕಾರಣವೇನು?

ಎ) ಆಕರ್ಷಕವಾಗಿರುವುದರಿಂದ

ಬಿ)ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ

ಸಿ)ದೃಷ್ಟಿ ದೋಷವುಳ್ಳವರು ಸುಲಭವಾಗಿ ಗುರುತಿಸುತ್ತಾರೆ

ಡಿ) ಹಲವರ ಅಚ್ಚುಮೆಚ್ಚಿನ ಬಣ್ಣ

267. ಈ ಕೆಳಗಿನವುಗಳಲ್ಲಿ ಸಂಪತ್ತಿನ ಸಮಾನ ಹಂಚಿಕೆಯು ಯಾವ ಮೌಲ್ಯವನ್ನು ಸೂಚಿಸುತ್ತದೆ?

ಎ) ಪ್ರಜಾಪ್ರಭುತ್ವ

ಬಿ) ರಾಜಪ್ರಭುತ್ವ

ಸಿ) ಸರ್ವಾಧಿಕಾರ

ಡಿ) ಸಮಾಜವಾದ

268. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿವೆ?

ಎ) ರಾಜ್ಯ ನಿರ್ದೇಶಕ ತತ್ವಗಳ ಮೌಲ್ಯ

ಬಿ) ರಾಷ್ಟ್ರೀಯ ಮೌಲ್ಯ

ಸಿ) ಅಂತರರಾಷ್ಟ್ರೀಯ ಸಹಭಾಗಿತ್ವ

ಡಿ) ಸಮಾಜವಾದಿ ಮೌಲ್ಯ

269. ರಾಷ್ಟ್ರೀಯ ಹಬ್ಬಗಳ ಆಚರಣೆಯು ಏನನ್ನು ಸಾಧಿಸುತ್ತದೆ?

ಎ) ರಾಷ್ಟ್ರೀಯ ಭಾವೈಕ್ಯ

ಬಿ) ರಾಷ್ಟ್ರೀಯ ಭದ್ರತೆ

ಸಿ) ಸಾಂಸ್ಕೃತಿಕ ಅಭಿವೃದ್ಧಿ

ಡಿ) ವಿಶ್ವಾಸಾರ್ಹತೆ

270. ಭಾರತವು ಜಗತ್ತಿನ ಭೂವಿಸ್ತೀರ್ಣದಲ್ಲಿ 7ನೇ ದೊಡ್ಡ ದೇಶ. ಇದರ ವಿಸ್ತೀರ್ಣವು ಜಗತ್ತಿನ ವಿಸ್ತೀರ್ಣದಲ್ಲಿ ಎಷ್ಟಿದೆ?

ಎ) ಶೇ 2.9

ಬಿ) ಶೇ 2.8

ಸಿ) ಶೇ 2.6

ಡಿ) ಶೇ 2.4

ಭಾಗ 18ರ ಉತ್ತರಗಳು

241. ಬಿ, 242. ಡಿ, 243. ಬಿ, 244. ಬಿ, 245. ಡಿ, 246. ಸಿ, 247. ಡಿ, 248. ಎ, 249. ಸಿ, 250. ಬಿ, 251. ಸಿ, 252. ಬಿ, 253. ಡಿ, 254. ಬಿ, 255. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.