ADVERTISEMENT

ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಇಂದು

ಪಿಟಿಐ
Published 23 ಜುಲೈ 2021, 19:11 IST
Last Updated 23 ಜುಲೈ 2021, 19:11 IST
   

ನವದೆಹಲಿ: ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಐಎಸ್‌ಸಿಇ) 10ನೇ ತರಗತಿ (ಐಸಿಎಸ್‌ಇ), 12ನೇ ತರಗತಿಯ (ಐಎಸ್‌ಸಿ) ಫಲಿತಾಂಶವನ್ನು ಜುಲೈ 24ರ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ.

ಫಲಿತಾಂಶ ಮಂಡಳಿಯ ವೆಬ್‌ಸೈಟ್‌ ನಲ್ಲಿ ಲಭ್ಯವಿರಲಿದ್ದು, ಎಸ್‌ಎಂಎಸ್‌ ಮೂಲಕವೂ ಸಿಗಲಿದೆ ಎಂದು ಮಂಡಳಿ ಯ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗ್ಯಾರಿ ಅರತೂನ್‌ ತಿಳಿಸಿದರು.

ಕ್ಯಾರಿಯರ್‌ ಪೋರ್ಟಲ್‌ ಮೂಲಕ ಆಯಾ ಶಾಲೆಗಳ ಅಂಕ ಪಟ್ಟಿ ದೊರೆ ಯಲಿದೆ. ಶಾಲೆಗಳ ಪ್ರಾಂಶುಪಾಲರ ಐ.ಡಿ ಮತ್ತು ಪಾಸ್‌ವರ್ಡ್‌ ಬಳಸಿ ವೆಬ್‌ನಿಂದ ಫಲಿತಾಂಶ ಪಡೆಯ ಬಹುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.