ADVERTISEMENT

ಕಾರು ಅಪಘಾತದಲ್ಲಿ ಮರಾಠಿ ನಟಿ ಈಶ್ವರಿ ದೇಶಪಾಂಡೆ ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 6:07 IST
Last Updated 22 ಸೆಪ್ಟೆಂಬರ್ 2021, 6:07 IST
ಈಶ್ವರಿ ದೇಶಪಾಂಡೆ ( ಚಿತ್ರಕೃಪೆ; ಇನ್‌ಸ್ಟಾಗ್ರಾಂ)
ಈಶ್ವರಿ ದೇಶಪಾಂಡೆ ( ಚಿತ್ರಕೃಪೆ; ಇನ್‌ಸ್ಟಾಗ್ರಾಂ)   

ಮುಂಬೈ: ಮರಾಠಿ ಯುವ ನಟಿ ಈಶ್ವರಿ ದೇಶಪಾಂಡೆ (25) ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗೆಳೆಯ ಶುಭಂ ಡಾಂಗೆ ಜತೆ ಈಶ್ವರಿ ಗೋವಾಗೆ ಪ್ರವಾಸ ಹೋಗಿದ್ದರು. ಕಾರು ಮಂಗಳವಾರ ಗೋವಾದ ಭಾಗಾ ನದಿಗೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ.

ನೀರಿಗೆ ಬಿದ್ದಾಗಕಾರು,ಸೆಂಟ್ರಲ್‌ ಲಾಕ್‌ ಆಗಿದ್ದ ಕಾರಣ ಇಬ್ಬರೂ ಸಹ ಕಾರಿನಿಂದ ಹೊರಗೆ ಬರಲಾಗದೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರ ಪೋಷಕರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈಶ್ವರಿ ಮರಾಠಿ ಸೇರಿದಂತೆ ಹಿಂದಿ ಸಿನಿಮಾದಲ್ಲೂ ನಟಿಸಿದ್ದರು. ಅವರು ನಟಿಸಿದ್ದ ಎರಡು ಮರಾಠಿ ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. ನಟಿಯ ಅಗಲಿಕೆಗೆ ಮರಾಠಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.