ADVERTISEMENT

ಟ್ರೈಲರ್ | ಚೇಷ್ಟೆ ಮಾಡಿ 'ಪೆಟ್ರೊಮ್ಯಾಕ್ಸ್‌’ ಹಚ್ಚಿದ ಸತೀಶ್ ನೀನಾಸಂ, ಹರಿಪ್ರಿಯಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 12:19 IST
Last Updated 20 ಸೆಪ್ಟೆಂಬರ್ 2021, 12:19 IST
ಪೆಟ್ರೊಮ್ಯಾಕ್ಸ್‌ ಪೋಸ್ಟರ್‌
ಪೆಟ್ರೊಮ್ಯಾಕ್ಸ್‌ ಪೋಸ್ಟರ್‌   

ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ‘ಪೆಟ್ರೊಮ್ಯಾಕ್ಸ್‌’ ಸಿನಿಮಾದಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 2ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.ವಿಜಯ್ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ‌ ಮುಕ್ತಾಯವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

’ಈ ಸಿನಿಮಾದಲ್ಲಿ ಚೇಷ್ಟೆಯೇ ಮುಖ್ಯ ಕಥಾಹಂದರ.ಮನರಂಜನೆ ಸಲುವಾಗಿ ಚೇಷ್ಟೆಯನ್ನು ಅಳವಡಿಸಲಾಗಿದೆ’ ಎಂದು ನಿರ್ದೇಶಕ ವಿಜಯ ಪ್ರಸಾದ್‌ ಹೇಳಿದ್ದಾರೆ.

ADVERTISEMENT

ಟ್ರೈಲರ್‌ನಲ್ಲಿ ಚೇಷ್ಟೆಯ ಜೊತೆಗೆ ಗಾಢವಾದ ಕತೆಯ ಮೂಲಕ ಭಾವುಕ ಪಯಣವನ್ನು ಕಾಣಬಹುದು

ನಾಯಕ ನಟರಾಗಿ ಸತೀಶ್ ನೀನಾಸಂ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್, ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ಕಾಣಿಸಿಕೊಂಡಿದ್ದಾರೆ.ಗೊಂಬೆಗಳ ಲವ್ ಖ್ಯಾತಿ ಅರುಣ್‌, ನಾಗಭೂಷಣ್‌, ಭುವಿ ಮೊದಲಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ.

ಸತೀಶ್ ಪಿಕ್ಚರ್ ಹೌಸ್ ಅಡಿ ನೀನಾಸಂ ಸತೀಶ್‌ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಸ್ಟುಡಿಯೊ 18 ಮತ್ತು ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದೆ. ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮೆರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.